ದೇವಸ್ಥಾನದ ಕಾಣೆಕೆ ಡಬ್ಬಿ ಕಳವಿಗೆ ವಿಫಲಯತ್ನ; ಒರ್ವನ ಬಂಧನ

Update: 2019-10-31 16:12 GMT

ಬಜಪೆ: ದೇವಸ್ಥಾನದ ಕಾಣೆಕೆ ಡಬ್ಬಿಯನ್ನು ಒಡೆದು ಅದರಲ್ಲಿದ ಹಣವನ್ನು ದೋಚಲು ವಿಫಲ ಯತ್ನ ನಡೆಸಿದ ಘಟನೆ ಕಟೀಲಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಬಜಪೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಕಟೀಲು ಕೊಂಡೆಮೂಲ ಗ್ರಾಮದ ಮದಕ ಗಿಡಿಗೆರೆ ನಿವಾಸಿ ಅರುಣ್ ಕುಮಾರ್ (23)ಬಂಧಿತ ಆರೋಪಿ.

ಆರೋಪಿಯು ಆ.22 ರಂದು ರಾತ್ರಿ 7 ಗಂಟೆಯ ಸುಮಾರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಅನತಿ ದೂರದಲ್ಲಿ ಇರುವ ಮೂಲಕುದ್ರುವಿನಲ್ಲಿ ದೇವರ ಗುಡಿಯ ಮುಂಭಾಗದಲ್ಲಿ ಇರಿಸಲಾಗಿದ್ದ ಕಾಣೆಕೆ ಡಬ್ಬಿಯನ್ನು ಒಡೆದು ಅದರಲ್ಲಿದ್ದ ಹಣವನ್ನು ದೋಚಲು ವಿಫಲ ಯತ್ನ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ಪಿ.ಎಸ್. ಹರ್ಷ ಅವರ ಆದೇಶದಂತೆ ಹಾಗೂ ಉಪ ಪೊಲೀಸ್ ಆಯುಕ್ತರಾದ ಅರುಣಾಂಶು ಗಿರಿ, ಶ್ರೀಲಕ್ಷ್ಮೀ ಗಣೇಶ್, ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ ಗೌಡ ಇವರ ನಿರ್ದೇಶನದಂತೆ ಆರೋಪಿಯ ಪತ್ತೆ ಕಾರ್ಯದಲ್ಲಿ ಬಜಪೆ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಕೆ.ಅರ್. ನಾಯಕ್, ಪಿ ಎಸ್ ಐ ಕಮಲ, ಸಹಾಯಕ ಉಪನಿರೀಕ್ಷಕ ರಾಮ ಪೂಜಾರಿ, ಹೆಚ್.ಸಿ ಗಳಾದ ಸುಧೀರ್ ಶೆಟ್ಟಿ, ಪುರುಷೊತ್ತಮ, ಸಂತೋಷ್ ಸುಳ್ಯ, ಹೊನ್ನಪ್ಪ ಗೌಡ, ಪಿಸಿಗಳಾದ ವಕೀಲ ಲಮಾಣೆ ರವರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಈ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಘಟನೆಯ ಬಗ್ಗೆ ಕಟೀಲು ದೇವಳದ ಅನುವಂಶಿಕ ಅರ್ಚಕರಾದ ಶ್ರೀ ವಾಸುದೇವ ಆಸ್ರಣ್ಣರು ನೀಡಿದ ದೂರಿನಂತೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News