ಕೈರಂಗಳ: ಬಸ್ ನಿಲ್ದಾಣದ ಶಿವಾಜಿ ಭಾವಚಿತ್ರವಿದ್ದ ಫಲಕಕ್ಕೆ ಬಣ್ಣ ಎರಚಿದ ಕಿಡಿಗೇಡಿಗಳು

Update: 2019-11-01 06:06 GMT

ಕೊಣಾಜೆ, ನ.1: ಕೊಣಾಜೆ ಠಾಣಾ ವ್ಯಾಪ್ತಿಯ ಕೈರಂಗಳದಲ್ಲಿ ಬಸ್ ನಿಲ್ದಾಣವೊಂದರ ನಾಮಫಲಕದಲ್ಲಿದ್ದ ಶಿವಾಜಿಯ ಭಾವಚಿತ್ರಕ್ಕೆ ಕಿಡಿಗೇಡಿಗಳು ಬಣ್ಣ ಎರಚಿದ ಘಟನೆ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

ಕೈರಂಗಳ ದೇವಿ ನಗರದಲ್ಲಿ ಛತ್ರಪತಿ ಶಿವಾಜಿ ಫ್ರೆಂಡ್ಸ್ ಯುವಕರು ಸಾರ್ವಜನಿಕ ಬಸ್ ನಿಲ್ದಾಣವನ್ನು ನಿರ್ಮಿಸಿದ್ದರು. ಆದರೆ ಕೆಲವು ದಿನಗಳ ಹಿಂದೆ ಬಸ್ ನಿಲ್ದಾಣಕ್ಕೆ ಕಿಡಿಗೇಡಿಗಳು ಬಣ್ಣ ಎರಚಿದ್ದರು. ಇದೀಗ ಗುರುವಾರ ರಾತ್ರಿಯೂ ಕಿಡಿಗೇಡಿಗಳು ಬಸ್ ನಿಲ್ದಾಣದ ನಾಮಫಲಕದಲ್ಲಿದ್ದ ಶಿವಾಜಿ ಭಾವಚಿತ್ರಕ್ಕೆ ಬಣ್ಣ ಎರಚಿದ್ದಾರೆ. ಈ ಮೂಲಕ ಪರಿಸರದ ಸೌಹಾರ್ದ ಕದಡುವ ಪ್ರಯತ್ನ ನಡೆದಿದೆ.

ಕೃತ್ಯದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಕೊಣಾಜೆ ಪೊಲೀಸರು ಸ್ಥಳದಲ್ಲಿ ಬಿಗುಬಂದೋಬಸ್ತ್ ಏರ್ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News