ವಲ್ಲಭಾಯಿ ಪಟೇಲರ ಏಕತಾ ತತ್ವ ಬದುಕಿನ ಭಾಗವಾಗಲಿ: ದೋಮ ಚಂದ್ರಶೇಖರ್

Update: 2019-11-01 14:37 GMT

ಕುಂದಾಪುರ, ನ.1: ಹರಿದು ಹಂಚಿ ಹೋಗಿದ್ದ ಭಾರತದ ಭೂಭಾಗವನ್ನು ಸ್ವಾತಂತ್ರದ ನಂತರ ವಲ್ಲಭಾಯಿ ಪಟೇಲರು ಕಠಿಣ ನಿರ್ಧಾರ ಹಾಗೂ ಪ್ರೀತಿಯ ಓಲೈಕೆ ಮೂಲಕ ಭವ್ಯ ಭಾರತಕ್ಕೆ ಅಡಿಪಾಯ ನಿರ್ಮಿಸುವಲ್ಲಿ ಸಫಲ ರಾದರು. ಇದನ್ನು ಕೇವಲ ಐತಿಹಾಸಿಕ ಘಟನೆಯಾಗಿ ಸ್ವೀಕರಿಸದೆ ಪಟೇಲರ ಏಕತಾ ತತ್ವವನ್ನು ಆದರ್ಶ ಮೌಲ್ಯವಾಗಿ, ಸ್ಪೂರ್ತಿಯ ಧಾರೆಯಾಗಿ ವರ್ತ ಮಾನದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ದೋಮ ಚಂದ್ರಶೇಖರ ಹೇಳಿದ್ದಾರೆ.

ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸ ಲಾದ ಏಕತಾ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿ ದ್ದರು. ಆದರ್ಶ ಬಾಳ್ವೆಗೆ, ಸಮಾಜದ ಒಳಿತಿಗೆ, ದೇಶದ ಭದ್ರತೆಗೆ ಏಕತಾ ಭಾವ ಅನಿವಾರ್ಯ ಎಂದು ಅವರು ಅಭಿಪ್ರಾಯ ಪಟ್ಟರು.

ಕೋಡಿ ಬ್ಯಾರೀಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಸಿದ್ಧಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಏಕತಾ ದಿವಸ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಶಿಕ್ಷಕರಾಗುವ ನಾವು ಪ್ರತಿ ದಿನವೂ ಇಂತಹ ಏಕತಾ ದಿನವನ್ನು ಕಾಣಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್ ರೆಹಮಾನ ಮಾತನಾಡಿ, ಏಕತಾ ತತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಪ್ರಭಾವಶಾಲಿ ಯಾಗಿ ಬೋಧಿಸುವ ಮೂಲಕ ಯೋಗ್ಯ ಪ್ರಜೆಗಳನ್ನು ನಿರ್ಮಿಸಬೇಕೆಂದರು.

ಈ ಸಂದರ್ಭದಲ್ಲಿ ಏಕತಾ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಸುಹಾಸಿನಿ ಸ್ವಾಗತಿಸಿದರು. ದಿಕ್ಷೀತಾ ವಂದಿಸಿದರು. ಸುರೇಖಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News