ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

Update: 2019-11-01 16:44 GMT

ಉಡುಪಿ, ನ.1: ನಗರದ ಖಾಸಗಿ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರೊಬ್ಬರು ವಿದ್ಯುತ್ ಆಘಾತದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಅ.31ರಂದು ಸಂಜೆ ವೇಳೆ ನಡೆದಿದೆ.

 ಮೃತರನ್ನು ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕಿರಣ್(32) ಎಂದು ಗುರುತಿಸಲಾಗಿದೆ. ಇವರು ಕಟ್ಟಡದ ಮೇಲೆ ಹೊರಭಾಗದಲ್ಲಿ ಸ್ಟಿಕರ್ ಹಚ್ಚುವ ಕೆಲಸ ಮಾಡುವಾಗ ಅಲ್ಲೇ ಅಳವಡಿಸಿರುವ ಮಿನಿಚರ್ ಲೈಟುಗಳನ್ನು ಚಾಲನೆ ಮಾಡಿದ್ದು, ಇದರಿಂದ ಕಿರಣ್ ವಿದ್ಯುತ್ ಶಾಕ್‌ಗೆ ಒಳಗಾಗಿ ಸುಮಾರು 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಬೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News