ದೇಗುಲಗಳಲ್ಲಿ ಉಚಿತ ಸಾಮೂಹಿಕ ವಿವಾಹ; ಸ್ವಾಗತ

Update: 2019-11-02 15:45 GMT

ಉಡುಪಿ, ನ.2: ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಮುಜರಾಯಿ ಇಲಾಖೆಯ ‘ಎ’ ದರ್ಜೆಯ ಆಯ್ದ ಸುಮಾರು 100 ದೇವಸ್ಥಾನಗಳಲ್ಲಿ ಹಿಂದೂ ಸಂಪ್ರದಾಯದಂತೆ ವರ್ಷದಲ್ಲಿ 1,000 ಜೋಡಿಗಳ ಉಚಿತ ಸಾಮೂಹಿಕ ವಿವಾಹ ನಡೆಸುವ ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ವಿನೂತನ ಜನಪರ ಯೋಜನೆ ಸ್ವಾಗತಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.

ಈ ಯೋಜನೆಯಂತೆ ಮುಂದಿನ ವರ್ಷದ ಎ.26 ಮತ್ತು ಮೇ 24ರಂದು ನಿಗದಿತ ನಿಯಮದೊಂದಿಗೆ ರಾಜ್ಯಾದ್ಯಂತ ನಡೆಯಲಿರುವ ಅರ್ಹ ಜನಸಾಮಾನ್ಯರ ಉಚಿತ ಸಾಮೂಹಿಕ ವಿವಾಹಕ್ಕೆ ಮುಜರಾಯಿ ಇಲಾಖೆಯು ದೇವಸ್ಥಾನಗಳ ಆದಾಯದಲ್ಲೇ 55,000ರೂ. ವೆಚ್ಚದಲ್ಲಿ ಚಿನ್ನದ ಮಂಗಲಸೂತ್ರ ಹಾಗೂ ವಧೂ-ವರರಿಗೆ ಪ್ರೋತ್ಸಾಹಧನ ವಿತರಿಸುವ ತೀರ್ಮಾನ ಪ್ರಶಂಸಾರ್ಹ ಎಂದು ಅದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News