​ಪೆರ್ಮುದೆ: ಮಹಿಳೆ ನಿಗೂಢ ಸಾವು ?

Update: 2019-11-02 18:27 GMT

ಮಂಗಳೂರು : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಎಂಬಲ್ಲಿ ‌ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂದ್ದಾರೆ ಎನ್ನಲಾದ ಘಟನೆ ಶನಿವಾರ ನಡೆದಿದ್ದು, ಈ ಬಗ್ಗೆ ಮಹಿಳೆಯ ಮನೆಯವರು ಸಂಶಯ ವ್ಯಕ್ತಪಡಿಸಿ, ದೂರು ನೀಡಿದ್ದಾರೆ.

ಪೆರ್ಮುದೆಯ ಭಟ್ರಕೆರೆಯ ನಿವಾಸಿ ಅಲ್ತಾಫ್ ಎಂಬವರ ಪತ್ನಿ ಲರೀಫತ್ ಎಂಬವರು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೃತ್ಯಕ್ಕೆ ಕಾರಣ ಏನು‌ ಎಂಬುದು ತಿಳಿದು ಬಂದಿಲ್ಲ. ಕತರ್ ಉದ್ಯೋಗಿಯಾಗಿದ್ದ ಅಲ್ತಾಫ್ ಮೂರು ದಿನದ ಹಿಂದೆ ಊರಿಗೆ ಬಂದಿದ್ದರು.‌ ಶನಿವಾರ ಅಲ್ತಾಫ್ ತರಕಾರಿ ತರಲು ಹೊರಗೆ ಹೋಗಿದ್ದು, ಮಧ್ಯಾಹ್ನ ಮನೆಗೆ ಬಂದಾಗ ಲರೀಫತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತನ್ನೆಲಾಗಿದೆ. ಘಟನೆಯ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ಬಜ್ಪೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News