ಬ್ಯಾರಿ ಸಿನೆಮಾ ‘ಬೈಲ್ ಕೋಲು’ ಕೊಲ್ಕತ್ತಾ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

Update: 2019-11-02 18:35 GMT

ಮಂಗಳೂರು : ಬೆಂಗಳೂರಿನ ಪ್ರಿಯದರ್ಶಿನಿ ಲಾಂಛನದಡಿಯಲ್ಲಿ ನಿರ್ಮಾಣಗೊಂಡ ಬ್ಯಾರಿ ಕಲಾತ್ಮಕ ಸಿನೆಮಾ ‘ಬೈಲ್ ಕೋಲು’ 2019ರ ಕೊಲ್ಕತ್ತಾ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಸಂತು ಗಂಗೊಳ್ಳಿ ಚಿತ್ರಕತೆ, ನಿರ್ದೇಶನದ ಈ ಚಲನಚಿತ್ರದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಹಿರಿಯ ನಟ ಎಂ.ಕೆ.ಮಠ, ಚಂದ್ರಹಾಸ್ ಉಳ್ಳಾಲ, ರೂಪಶ್ರೀ ವರ್ಕಾಡಿ, ಆಝಾದ್ ಕಂಡಿಗ, ಭವ್ಯಾ ಕೆ., ಸಂದೀಪ್ ಕುಮಾರ್, ಭಾಸ್ಕರ್ ಮಣಿಪಾಲ, ಬಾಲನಟಿ ಎಸ್.ಎಸ್.ಮಠ ಮತ್ತು ಬಾಲನಟ ಮಾಸ್ಟರ್ ಧನುಶ್ ಅಭಿನಯಿಸಿದ್ದಾರೆ.

ಚಿತ್ರಕ್ಕೆ ನಾಗೇಶ್ ಎನ್. ಅವರ ಕಥೆ ಮತ್ತು ಎಂ.ಕೆ.ಮಠ ಅವರ ಸಂಭಾಷಣೆ, ಪಿ.ವಿ.ಆರ್ .ಸ್ವಾಮಿಯ ಡಿಒಪಿ, ವೆಂಕಟರಮಣರ ಛಾಯಾಗ್ರಹಣ ಹಾಗೂ ನಿತಿನ್ ಸಂಕಲನ ಮಾಡಿದ್ದಾರೆ.

‘ಬೈಲ್ ಕೋಲು’ ಈ ಪ್ರತಿಷ್ಠಿತ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಬ್ಯಾರಿ ಭಾಷೆಯ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಲನಚಿತ್ರೋತ್ಸವವು ನ.8ರಿಂದ 15ರವರೆಗೆ ಕೊಲ್ಕತ್ತಾದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News