ರಾಜಕೀಯ ವ್ಯವಸ್ಥೆಯ ಅಗತ್ಯತೆಯ ಬಗ್ಗೆ ಚಿಂತಿಸಬೇಕಿದೆ: ನ್ಯಾ. ಸಂತೋಷ್ ಹೆಗ್ಡೆ

Update: 2019-11-03 16:43 GMT

ಮಂಗಳೂರು, ನ.3: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವಷ್ಟು ಉತ್ತಮ ರಾಜಕೀಯ ವ್ಯವಸ್ಥೆ ಬೇರೆ ಇಲ್ಲ. ಆದರೆ ನಮ್ಮ ದೇಶದ ರಾಜಕೀಯ ವ್ಯವಸ್ಥೆಯು ಜನರ ಧ್ವನಿಯಾಗಲು ವಿಫಲವಾದ ನಿದರ್ಶನಗಳು ವಿಷಾದನೀಯ. ಹೀಗಾದರೆ ರಾಜಕೀಯ ವ್ಯವಸ್ಥೆಯ ಅಗತ್ಯತೆಯ ಬಗ್ಗೆ ಪುನಃ ಚಿಂತನೆ ನಡೆಸಬೇಕಾಗುತ್ತದೆ ಎಂದು ನಿವೃತ್ತ ಲೋಕಾಯುಕ್ತ ಡಾ. ಎಂ. ಸಂತೋಷ್ ಹೆಗ್ಡೆ ಹೇಳಿದರು.

ನಗರದ ಸಂತ ಅಲೋಸಿಸ್ ಕಾಲೇಜಿನಲ್ಲಿ ರವಿವಾರ ನಡೆದ ವಿಶ್ವಸಂಸ್ಥೆಯ ಕುರಿತಾದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

2004ರಲ್ಲಿ ಲೋಕಸಭೆಯಲ್ಲಿ 14 ದಿನಗಳ ಕಲಾಪ ನಡೆದಿತ್ತು. ಆದರೆ, ಜನರ ಸಮಸ್ಯೆಗಳ ಕುರಿತು ಒಂದೇ ಒಂದು ವಿಚಾರದ ಬಗ್ಗೆ ಚರ್ಚೆಯೇ ಆಗಲಿಲ್ಲ. 1 ದಿನದ ಕಲಾಪಕ್ಕೆ 10 ಕೋ.ರೂ. ಖರ್ಚಾಗುತ್ತದೆ. ಇಷ್ಟು ದೊಡ್ಡ ಮೊತ್ತದ ಹಣ ವ್ಯರ್ಥವಾದರೂ ಚರ್ಚೆಯಾಗದಿರುವುದು ವಿಪರ್ಯಾಸ. 2004-09ರ ಅವಧಿಯಲ್ಲಿ ಕೇವಲ175 ಸಂಸದರು ಮಾತ್ರ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿತ್ತು ಎಂದು ಸಂತೋಷ್ ಹೆಗ್ಡೆ ನುಡಿದರು.

ಇಂತಹ ರಾಜಕೀಯ ವ್ಯವಸ್ಥೆ ಬದಲಾಗಬೇಕು. ಅದಕ್ಕಾಗಿ ಯುವಜನತೆ ಮಾನವೀಯತೆ ಮತ್ತು ಸಂತೃಪ್ತಿ ಎಂಬ ಶ್ರೇಷ್ಠ ವೌಲ್ಯವನ್ನು ರೂಢಿಸಿಕೊಂಡು ಬೆಳೆಸಬೇಕು. ಇನ್ನೊಬ್ಬರ ಹಕ್ಕುಗಳನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡರೆ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ಉಳಿಸಬಹುದು ಎಂದು ಸಂತೋಷ್ ಹೆಗ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News