ವಗ್ಗ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಜನಸಂಚಲನ ಕಾರ್ಯಕ್ರಮ

Update: 2019-11-04 14:33 GMT

ವಗ್ಗ: ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಕ್ಲಸ್ಟರ್ ವತಿಯಿಂದ ನಡೆಸಲಾದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾದಕ ವ್ಯಸನದ ವಿರುದ್ಧ ಜನ ಸಂಚಲನ ಕಾರ್ಯಕ್ರಮವು ವಗ್ಗ ಜಂಕ್ಷನ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಗ್ಗ ಜುಮಾ ಮಸೀದಿ ಖತೀಬ್ ಇಬ್ರಾಹೀಂ ಫೈಝಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಬ್ದುಲ್ ಸತ್ತಾರ್ ಕೌಸರಿ ಪ್ರತಿಜ್ಞಾ ಸ್ವೀಕಾರ ಭೋದಿಸಿ ಮಾತನಾಡಿದರು. ನಂತರ ಇಸಾಕ್ ಬೆಳ್ಳಾರೆ ಮಾತನಾಡಿ, ಮಾದಕ ವ್ಯಸನ ಮುಕ್ತ ಸಮಜ ನಿರ್ಮಾನಕ್ಕಾಗಿ ಕರೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮೀತಿ ಸದಸ್ಯ ಬಶೀರ್ ಮಜಲ್ ಎಸ್ಕೆಎಸ್ಸೆಸ್ಸೆಫ್ ನಡೆದು ಬಂದ ಹಾದಿಯನ್ನು ವಿವರಿಸಿದರು.

ಡಾ. ಪ್ರವೀಣ್ ಸೇರಾ ವಗ್ಗ, ಸಿರಾಜುದ್ದೀನ್ ಫೈಝಿ ಲೊರೊಟ್ಟೊ ಪದವು, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಶಾದ್ ದಾರಿಮಿ ಮಿತ್ತಬೈಲ್ ಮತ್ತಿತರರು ಮಾತನಾಡಿ, ಶುಭ ಹಾರೈಸಿದರು‌.

ಎಮ್.ಜೆ.ಎಮ್ ಅಧ್ಯಕ್ಷ ಅಬ್ದುಲ್ ಸಲಾಂ ವಗ್ಗ, ಐ.ಎಮ್.ಎಸ್.ಎಸ್ ಅಧ್ಯಕ್ಷ ಮಹಮ್ಮದ್ ರಫೀಕ್, ಎಸ್ಕೆಎಸ್ಸೆಸ್ಸೆಫ್ ವಗ್ಗ ಯುನಿಟ್ ಅಧ್ಯಕ್ಷ ರಫೀಕ್ ವಗ್ಗ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಕಾರ್ಯದರ್ಶಿ ಹನೀಫ್, ಬಂಟ್ವಾಳ ಕ್ಲಸ್ಟರ್ ಕಾರ್ಯದರ್ಶಿ ಮುಸ್ತಫಾ ಕಟ್ಟದಪಡ್ಪು, ಸಿದ್ದೀಕ್ ಅಬ್ದುಲ್ ಖಾದರ್, ಮುಹಮ್ಮದ್ ಅಲಿ ವಗ್ಗ, ಇ.ಕೆ. ಅಬ್ದುಲ್ ಲತೀಫ್ ವಗ್ಗ, ಯೂಸುಫ್ ಬಾಂಬಿಲ, ಶಹಝಾನ್ ಮೈಂದಾಲ, ಇಮ್ರಾನ್ ಬಾಂಬಿಲ ಮತ್ತಿತರರು ಉಪಸ್ಥಿತರಿದ್ದರು.

ಶಾಹುಲ್ ಕಾಸಿಮ್ ವಗ್ಗ ಕಾರ್ಯಕ್ರಮವನ್ನು ಸ್ವಾಗತಿಸಿ, ವಂದಿಸಿದರು. ಸಫ್ವಾನ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News