ಸಮಸ್ತದ ಕಾರ್ಯಚಟುವಟಿಕೆಗಳಿಗೆ ಸಾರ್ವಜನಿಕರಿಂದ ಉತ್ತಮ ಬೆಂಬಲ: ಜಿಪ್ರಿ ತಂಙಳ್

Update: 2019-11-04 15:56 GMT

ಮಂಗಳೂರು, ನ.4: ಸಮಸ್ತ ಜಂಇಯ್ಯತ್ತುಲ್ ಉಲಮಾದ ಪ್ರಗತಿಪರ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಬೆಂಬಲ ನೀಡಲು ಸಾರ್ವಜನಿಕರು ಮುಂದೆ ಬರುತ್ತಿದ್ದಾರೆ.ಅದರಲ್ಲೂ ಉಮರಾ ನಾಯಕರು ತಮ್ಮ ಉದಾರತೆಯನ್ನು ತೋರುತ್ತಿರುವುದರಿಂದ ಸಮಸ್ತಾಲಯದಂತಹ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿದೆ ಎಂದು ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ಸೈಯ್ಯದುಲ್ ಉಲಮಾ ಜಿಪ್ರಿ ತಂಙಳ್ ಹೇಳಿದ್ದಾರೆ.

ನಗರದ ಬಂದರ್‌ನ ಝೀನತ್ ಭಕ್ಷ್ ಮಸೀದಿ ಸಮೀಪ ಜಿಲ್ಲಾ ಮದ್ರಸ ಮ್ಯೋನೇಜ್‌ಮೆಂಟ್ ವತಿಯಿಂದ ನಿರ್ಮಿಸಲಾದ ‘ಸಮಸ್ತಾಲಯ’ ಕಟ್ಟಡವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಖಾಝಿ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚೆಗೆ ಪ್ರವಾಹದಿಂದ ತತ್ತರಿಸಿದ ಜಲ್ಲೆಯ ಆಯ್ದ ಫಲಾನುಭವಿಗಳಿಗೆ ಸಮಸ್ತದ ವತಿಯಿಂದ ನೀಡಲಾದ ಪರಿಹಾರ ಮೊತ್ತವನ್ನು ಶೈಖುನಾ ಎಂಟಿ ಉಸ್ತಾದ್ ವಿತರಿಸಿದರು. ಸಮಸ್ತ ಉಪಾಧ್ಯಕ್ಷ ಯುಎಂ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಕೊಡಗು ಅಬ್ದುಲ್ಲ ಫೈಝಿ, ವಿದ್ಯಾಭ್ಯಾಸ ಬೋರ್ಡ್ ಮ್ಯಾನೇಜರ್ ಮುಹಮ್ಮದ್ ಕುಟ್ಟಿ ಮಾಸ್ಟರ್, ಕೆಆರ್ ಹುಸೈನ್ ದಾರಿಮಿ ರೆಂಜಲಾಡಿ, ಬಿಕೆ ಅಬ್ದುಲ್ ಖಾದಿರ್ ಮುಸ್ಲಿಯಾರ್ ಮಾತನಾಡಿದರು.

ವೇದಿಕೆಯಲ್ಲಿ ಉಸ್ಮಾನ್ ಫೈಝಿ, ಮೊಯಿದಿನಬ್ಬ ಹಾಜಿ, ಎಸ್‌ಬಿ ದಾರಿಮಿ ಮುಲ್ಕಿ, ಬೆಳ್ತಂಗಡಿ ಜಿಫ್ರಿ ತಂಙಳ್, ಕುಕ್ಕಾಜೆ ಬಾಅಲವಿ ತಂಙಳ್, ಯುಕೆ ದಾರಿಮಿ ಚೊಕ್ಕಬೆಟ್ಡು,ಮಾಜಿ ಮೇಯರ್ ಅಶ್ರಫ್, ಸೆಂಟ್ರಲ್ ಕಮಿಟಿಯ ಹನೀಫ್ ಹಾಜಿ, ಎಸ್‌ಎಂಎಫ್‌ನ ರಝಾಕ್ ಹಾಜಿ, ಇರ್ಷಾದ್ ದಾರಿಮಿ ಮಿತ್ತಬೈಲ್, ತಬೂಕು ದಾರಿಮಿ, ಕೆಎಲ್ ದಾರಿಮಿ, ಕೆಬಿ ದಾರಿಮಿ, ಇಬ್ರಾಹೀಂ ಬಾಖವಿ, ಕಾಸಿಂ ದಾರಿಮಿ ತೋಡಾರ್, ಹಕೀಂ ಪರ್ತಿಪಾಡಿ, ಮಾಹಿನ್ ದಾರಿಮಿ, ನೌಷಾದ್ ಹಾಜಿ, ಮೆಟ್ರೋ ಶಾಹುಲ್ ಹಮೀದ್ ಹಾಜಿ, ಕಡಬ ಖಾದರ್ ಹಾಜಿ, ಮಜೀದ್ ಹಾಜಿ ಸೂರಲ್ಪಾಡಿ, ಎಲ್ಟಿ ರಝಾಕ್ ಹಾಜಿ, ಅಬ್ದುರ್ರಹ್ಮಾನ್ ಆಝಾದ್, ಹಮೀದ್ ಕರಾವಳಿ, ಇಬ್ರಾಹೀಂ ಬೀಟಿಗೆ, ಯೂಸುಫ್ ಬದ್ರಿಯಾ, ಸುಲೈಮಾನ್ ಹಾಜಿ ಕಲ್ಲಡ್ಕ, ರಿಯಾಝ್ ಹಾಜಿ ಬಂದರ್, ರಫೀಕ್ ಹಾಜಿ ಕುತುಬಿ ಕೆಸಿ ರೋಡ್, ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೆಜಾಲ್, ಎಂಎಸ್ ಹಮೀದ್, ಇಸ್ಮಾಯೀಲ್ ನೇರಳಕಟ್ಟೆ, ಮೊಯ್ಯದ್ದಿ ಗುಂಡುಕಲ್ಲು, ಕೆಐ ಅಬ್ದುಲ್ ಖಾದಿರ್ ದಾರಿಮಿ ವಳಚ್ವಿಲ್, ಸದಕತುಲ್ಲಾ ಪೈಝಿ, ಇಸ್ಮಾಯೀಲ್ ಯಮಾನಿ ಮತ್ತಿತರರು ಉಪಸ್ಥಿತರಿದ್ದರು.

ಮ್ಯಾನೇಜ್‌ಮೆಂಟ್ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ಸ್ವಾಗತಿಸಿದರು. ಹಮೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News