ಕುಂದಾಪುರ-ಬೆಂಗಳೂರು ಅಂಬಾರಿ ಡ್ರೀಮ್‌ಕ್ಲಾಸ್ ಎ.ಸಿ. ಸ್ಲೀಪರ್ ಬಸ್ ಸೇವೆ

Update: 2019-11-04 16:49 GMT

ಮಂಗಳೂರು, ನ.4:ಕೆಎಸ್ಸಾರ್ಟಿಸಿ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಬೆಂಗಳೂರು-ಕುಂದಾಪುರ ನಡುವೆ ಮಂಗಳೂರು, ಉಡುಪಿ, ಕುಂದಾಪುರ, ಮಣಿಪಾಲ ಮಾರ್ಗದಲ್ಲಿ ಈಗಾಗಲೇ ಐರಾವತ ಕ್ಲಬ್‌ಕ್ಲಾಸ್ ಮಲ್ಟಿಆಕ್ಸ್‌ಲ್ ಸಾರಿಗೆಯನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಅದನ್ನೀಗ ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿಅಕ್ಸ್‌ಲ್ ಎ.ಸಿ. ಸ್ಲೀಪರ್ ಸಾರಿಗೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.

ಈ ಬಸ್ ಬೆಂಗಳೂರಿನಿಂದ ರಾತ್ರಿ 10:10ಕ್ಕೆ ಹೊರಟು ಹಾಸನ, ಮಂಗಳೂರು, ಉಡುಪಿ, ಮಣಿಪಾಲ ಮಾರ್ಗವಾಗಿ ಕುಂದಾಪುರಕ್ಕೆ ಬೆಳಗ್ಗೆ 7:30 ಗಂಟೆಗೆ ತಲುಪಲಿದೆ. ಬಳಿಕ ಕುಂದಾಪುರದಿಂದ ರಾತ್ರಿ 8:45ಕ್ಕೆ ಹೊರಟು ಮಣಿಪಾಲ, ಉಡುಪಿ, ಮಂಗಳೂರು ಉಪ್ಪಿನಂಗಡಿ, ಸಕಲೇಶಪುರ, ಹಾಸನ ಮಾರ್ಗವಾಗಿ ಬೆಂಗಳೂರಿಗೆ ಬೆಳಗ್ಗೆ 6 ಗಂಟೆಗೆ ತಲುಪಲಿದೆ. ಪ್ರತಿ ಪ್ರಯಾಣಿಕರಿಗೆ 1,000 ರೂ.ನಿಗದಿಪಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News