ಸಿಂಡಿಕೇಟ್ ಬ್ಯಾಂಕ್‌ಗೆ 251 ಕೋಟಿ ನಿವ್ವಳ ಲಾಭ !

Update: 2019-11-04 17:28 GMT

ಬೆಂಗಳೂರು, ನ.4: ಸಿಂಡಿಕೇಟ್ ಬ್ಯಾಂಕ್ 2019-20 ನೆ ಸಾಲಿನ ಆರ್ಥಿಕ ವರ್ಷದ ಎರಡನೆ ತ್ರೈಮಾಸಿಕದಲ್ಲಿ 251 ಕೋಟಿ ನಿವ್ವಳ ಲಾಭಗಳಿಸಿದ್ದು, 2019ರ ಸೆಪ್ಟೆಂಬರ್ ಅಂತ್ಯಕ್ಕೆ ಆಪರೇಟಿಂಗ್ ಲಾಭ ಶೇ.68ಕ್ಕೆ ಏರಿಕೆಯಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಅಧಿಕವಿದ್ದು, ಕಳೆದ ವರ್ಷ 570 ಕೋಟಿ ಇತ್ತು. ಈ ವರ್ಷ ಅದು 956 ಕೋಟಿ ರೂ.ಇದೆ. ಇತರೆ ಆದಾಯ ಶೇ.52 ಹೆಚ್ಚಳವಾಗಿದೆ. ಕಳೆದ ವರ್ಷ 490 ಕೋಟಿ ಇದ್ದದ್ದು, ಈ ವರ್ಷ 746 ಕೋಟಿಗೆ ತಲುಪಿದೆ.

ನಿವ್ವಳ ಬಡ್ಡಿ ಆದಾಯ(ಎನ್‌ಐಐ) ಶೇ.11 ಹೆಚ್ಚಳವಾಗಿದೆ. ಕಳೆದ ವರ್ಷ 1, 572 ಕೋಟಿ ರೂ.ಗಳಿತ್ತು. ಈ ವರ್ಷ 1, 739 ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟಾರೆ ವೆಚ್ಚ ಮತ್ತು ಆದಾಯದ ಸರಾಸರಿನುಪಾತ ಶೇ.72.25ಕ್ಕೆ ಇಳಿದಿದೆ. ಕಳೆದ ವರ್ಷ ಜಾಗತಿಕ ವ್ಯವಹಾರ 4,75,225 ಕೋಟಿ ರೂ. ಇದ್ದದ್ದು, ಈ ವರ್ಷ 4,81,081 ಕೋಟಿ ರೂ. ಕಂಡಿದೆ.

ರಿಟೇಲ್, ಕೃಷಿ, ಎಂಎಸ್‌ಎಂಇ ಕ್ಷೇತ್ರಕ್ಕೆ ಬ್ಯಾಂಕ್ ಅಧಿಕ ಆದ್ಯತೆ ಮೇರೆಗೆ ಸಾಲ ನೀಡಲಾಗುತ್ತಿದೆ. ಒಟ್ಟಾರೆ ಬ್ಯಾಂಕ್ ಠೇವಣಿ 2,59,443 ಕೋಟಿ ಇದೆ. ಇದು ಕಳೆದ ವರ್ಷ 2,68,222 ಕೋಟಿ ರೂ.ಇತ್ತು.

ಪ್ರಗತಿ ಕಡೆಗೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಗತಿ ಸಾಧಿಸಿದ್ದೇವೆ. ವ್ಯವಹಾರ ವೃದ್ಧಿ ಕಡೆಗೆ ಮತ್ತಷ್ಟು ಗಮನ ಹರಿಸುತ್ತೇವೆ. ರಿಟೇಲ್ ಷೇರು, ಐಟಿ ಸಂಬಂಧಿಸಿದ ಸೇವೆಗಳ ಠೇವಣಿ ಹೆಚ್ಚಳ ಹಾಗೂ ಎನ್‌ಪಿಎ ಮರು ವಸೂಲಿ ಮಾಡಲಿದ್ದೇವೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News