ಮಂಗಳೂರು: ಟಿಆರ್ ಎಫ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

Update: 2019-11-04 17:31 GMT

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೆಶನ್ ಮಂಗಳೂರು ಪ್ರಯೋಜಿತ ಟ್ಯಾಲೆಂಟ್ ಗ್ರಾಜುವೆಟ್ ಅಸೋಶಿಯೆನ್ ಆಶ್ರಯದಲ್ಲಿ ಮದನಿ ಪದವಿ ಪೂರ್ವ ಕಾಲೇಜು ಅಳೇಕಲ ಉಳ್ಳಾಲ ಹಾಗೂ ಯನೆಪೋಯ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಮಹಿಳೆಯರಿಂದ ಮಹಿಳೆಯರಿಗಾಗಿ, ಎಂಬ ವಿಶಿಷ್ಟ ನಾಮದಡಿ ಇತ್ತಿಚೆಗೆ ಮದನಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿದ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೊಪಾದ್ಯಾಯಿನಿ ರಮ್ಲತ್ ಮಾತನಾಡಿ ಮಹಿಳೆಯರಲ್ಲಿ ತನ್ನ ಅಂಗಾಗಳ ಬಗ್ಗೆ ಅರಿವನ್ನು ಮುಡಿಸುವ ಕಾರ್ಯ ಶ್ಲಾಘನೀಯವಾದದ್ದು. ಸ್ತನ ಕ್ಯಾನ್ಸರನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಅದನ್ನು ಗುಣಪಡಿಸಬಹುದು ಎಂದರು.

ಮುಖ್ಯ ಅಥಿತಿಯಾಗಿ ಯನೋಪಯೊ ಹೋಮಿಯೊಪಥಿಕ್ ಕಾಲೇಜು ವೈದರಾದ ಡಾ. ಡೆಲ್ಸೀ ಮತ್ತು ಡಾ. ಅಪೇಕ್ಷಾ ಸ್ತನ ಕ್ಯಾನ್ಸರ್ ಬಗ್ಗೆ ಪೂರಕ ಮಾಹಿತಿ ನೀಡಿದರು. ಅಲ್ಲದೆ ಡಾ. ಡೋನ ಮತ್ತು ಡಾ. ಸುರೇಯ ವೈದ್ಯಕೀಯ ತಪಾಸಣೆ ಶಿಬಿರವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ಯಾಲೆಂಟ್ ಗ್ರಾಜುವೆಟ್ ಅಸೋಶಿಯನ ಅಧ್ಯಕ್ಷೆ ಉಪನ್ಯಾಸಕಿ ಸಾರ ತನ್ನ ಅಧ್ಯಕ್ಷಿಯ ಭಾಷಣದಲ್ಲಿ ಅರೋಗ್ಯ ಪೂರ್ಣ ಸಮಾಜದಲ್ಲಿ ಯುವಜನತೆಯ ಪಾತ್ರ ಎಂಬ ವಿಷಯದಲ್ಲಿ ಮಾತನಾಡಿದರು.

ಟ್ಯಾಲೆಂಟ್ ಗ್ರಾಜುವೆಟ್ ಅಸೋಶಿಯೆನ್ ಸದಸ್ಯೆ ಸುಹಾನ ಪ್ರಾರ್ಥನೆ ನೇರವೆರಿಸಿದರು. ಸಂಸ್ಥೆಯ ಉಪಾಧ್ಯಕ್ಷೆ ರಷಿಕ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಶಾಝಿಯ ವಂದಿಸಿದರು. ಸಂಸ್ಥೆಯ ಸಲಹೆಗಾರರಾದ ಮಮ್ತಾಝ್ ಪರ್ವೆಝ್ ಕಾರ್ಯಕ್ರಮ ನಿರೂಪಿಸಿದರು.

ಸದಸ್ಯರಾದ ಅಫ್ರಿನಾ, ಹಾಝರ, ರಯ್ಯಾನಾ, ಝೊಹರ, ಸುಮಾಯ್ಯ, ಉಪಸ್ಥಿರಿದ್ದು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News