ಎಟಿಎಂ ನಂಬರ್ ಪಡೆದು ಹಣ ವಂಚನೆ
Update: 2019-11-05 16:22 GMT
ಉಡುಪಿ, ನ.5: ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ ಎಟಿಎಂ ನಂಬರ್ ಪಡೆದು ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿ ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ಣಂಕಿಲ ಗ್ರಾಮದ ಪಟ್ಲ ನಿವಾಸಿ ಉಮೇಶ ನಾಯಕ್(47) ಎಂಬವರು ಕೆನರಾ ಬ್ಯಾಂಕ್ ಮೂಡುಬೆಳ್ಳೆ ಶಾಖೆಯಲ್ಲಿ ಖಾತೆ ಹೊಂದಿದ್ದು, ನ.2ರಂದು ಇವರ ಮೊಬೈಲ್‌ಗೆ ಬ್ಯಾಂಕ್ ಅಧಿಕಾರಿ ಎಂದು ಹೇಳಿ ಕರೆ ಮಾಡಿದ ವ್ಯಕ್ತಿ, ಎಟಿಎಂ ಕಾಡ್‌ನ ನಂಬರ್ ಹಾಗೂ ಓಟಿಪಿ ಪಡೆದು ಇವರ ಬ್ಯಾಂಕ್ ಖಾತೆ ಯಿಂದ ಒಟ್ಟು 99,999ರೂ. ಹಣವನ್ನು ಡ್ರಾ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.