ತೆರೆದ ತೋಡಿನಲ್ಲಿ ನಗರಸಭೆ ಶೌಚಾಲಯದ ತ್ಯಾಜ್ಯದ ನೀರು!

Update: 2019-11-07 12:30 GMT

 ಉಡುಪಿ, ನ.7: ನಗರಸಭೆ ಕಛೇರಿ ಒಳಭಾಗದಲ್ಲಿರುವ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಯೋಗಿಸುವ ಶೌಚಾಲಯದಿಂದ ಶೌಚ ತ್ಯಾಜ್ಯವು ಕಚೇರಿಯ ಹಿಂಭಾಗದಲ್ಲಿರುವ ತೆರೆದ ತೋಡಿನಲ್ಲಿ ಹರಿಯುತ್ತಿದ್ದು, ಇದರಿಂದ ಪರಿಸರದಲ್ಲಿ ಗಬ್ಬುವಾಸನೆ ಬಡಿಯುತ್ತಿದೆ.

ನಗರ ಕೇಂದ್ರ ವಾಚನಾಲಯದ ಪಕ್ಕದಿಂದ ನಿತ್ಯಾನಂದ ಮಂದಿರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ವಿದ್ಯಾರ್ಥಿಗಳು, ಭಕ್ತರು, ಸಾರ್ವಜನಿಕರು ಸಂಚರಿಸುತ್ತಿದ್ದು, ಇಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲಿ ಮಾರಕ ಸೊಳ್ಳೆಗಳು ಆಶ್ರಯಿಸಿಕೊಂಡಿದ್ದು, ಪರಿಸರದಲ್ಲಿ ಡೆಂಗ್, ಮಲೇರಿಯಾ ಮಾರಕ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ.

ಸಾರ್ವಜನಿಕರು ಸಂಬಂಧಪಟ್ಟವರಿಗೆ ಮೌಖಿಕವಾಗಿ ದೂರು ನೀಡಿದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಮೇಲಾಧಿಕಾರಿಗಳಾದರೂ ಸಾರ್ವ ಜನಿಕರ ಅಳಲಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪದಾಧಿಕಾರಿಗಳಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News