ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮೀ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

Update: 2019-11-08 04:23 GMT

ಮೂಡುಬಿದಿರೆ: ಅಲ್ ಫುರ್ಖಾನ್ ಇಸ್ಲಾಮೀ ವಿದ್ಯಾಸಂಸ್ಥೆಯ ವಿವಿಧ ವಿಭಾಗಗಳ ವಾರ್ಷಿಕ ಕ್ರೀಡೋತ್ಸವವು  ಸ್ವರಾಜ್ ಮೈದಾನ ಮೂಡಬಿದ್ರೆ ಹಾಗೂ ಶಾಲಾ ಕ್ಯಾಂಪಸ್ಸಿನಲ್ಲಿ ಇತ್ತೀಚೆಗೆ ಜರುಗಿತು.

ವಿದ್ಯಾರ್ಥಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೂಡಬಿದ್ರಿಯ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ದೇಜಪ್ಪ ರವರು ಕ್ರೀಡೆ ಹಾಗೂ ಶಿಕ್ಷಣ ಒಂದೇ ಬಂಡಿಯ ಎರಡು ಚಕ್ರಗಳಿದ್ದಂತೆ, ಅವುಗಳು ಜೊತೆಜೊತೆಯಾಗಿ ಮುನ್ನುಗ್ಗಿದರೆ ವಿದ್ಯಾರ್ಥಿ ಜೀವನ ಸಫಲತೆ ಕಾಣುತ್ತದೆ ಎನ್ನುತ್ತಾ ಕ್ರೀಡೆ ಹಾಗೂ ಪಥಸಂಚಲನದ ಮಹತ್ವವನ್ನು ವಿವರಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಶಶಿಧರ್ ಮೂಡಬಿದ್ರಿ, ಇಂಜಿನಿಯರ್ ಇಕ್ಬಾಲ್ ಸಿದ್ದಕಟ್ಟೆ, ಸಂಸ್ಥೆಯ ಕೋಶಾಧಿಕಾರಿ ಮೊಹಮ್ಮದ್ ಅಶ್ಫಾಕ್,  ಆಡಳಿತಾಧಿಕಾರಿ ಮೊಹಮ್ಮದ್ ಶಹಾಮ್, ಆಲಿಮ  ಕಾಲೇಜಿನ ಪ್ರಾಂಶುಪಾಲರಾದ  ಶೇಖ್ ಅಬ್ದುಲ್ ಮುಸವಿರ್ ಮದನಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರ ಕ್ರೀಡಾಕೂಟವನ್ನು ಉದ್ಘಾಟಿಸಿದ ಮಿಡಿತ ಮ್ಯಾಗಜಿನ್ ಪ್ರಧಾನ ಸಂಪಾದಕರಾದ ಫಾತಿಮಾಬಿ ಮಾತನಾಡಿ ಆಧುನಿಕ ಜಗತ್ತಿನಲ್ಲಿ ಮುಸ್ಲಿಂ ಯುವತಿಯರು ಇಸ್ಲಾಮಿಕ್ ಚೌಕಟ್ಟಿನೊಳಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಿಧಾನವನ್ನು ತೋರಿಸಿ ಕೊಡುವಲ್ಲಿ ಅಲ್ ಫುರ್ಖಾನ್ ವಿದ್ಯಾಸಂಸ್ಥೆಯು ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ನಝ್ರಾನ, ಉಪ ಪ್ರಾಂಶುಪಾಲರಾದ  ಅನಿಸಾ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ  ಆಡಳಿತಾಧಿಕಾರಿ ಮೊಹಮ್ಮದ್ ಶಹಾಮ್, ತಾಂತ್ರಿಕ ಆಡಳಿತಾಧಿಕಾರಿ ನೂರ್ ಮುಹಮ್ಮದ್, ಉಪ ಪ್ರಾಂಶುಪಾಲರಾದ ಅಲ್ತಾಫ್, ದೈಹಿಕ ಶಿಕ್ಷಕರಾದ ಉಬೇದುಲ್ಲಾ ಖಾನ್ ಹಾಗೂ ವಿದ್ಯಾರ್ಥಿನಿಯರ ವಿಭಾಗದಲ್ಲಿ ಡಾಕ್ಟರ್ ತಸ್ನೀಮ್ ಮೂಡಬಿದ್ರೆ ಮತ್ತು ಆಯಿಶಾ ಝಹಿಯ ಉಪಸ್ಥಿತರಿದ್ದರು. ಫಕ್ರುದ್ದೀನ್ ರಾಝಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News