ಗಾಂಜಾ ಸೇವನೆ: ಇಬ್ಬರ ಬಂಧನ
Update: 2019-11-08 16:19 GMT
ಉಡುಪಿ, ನ.8: ಗಾಂಜಾ ಅಮಲು ಪದಾರ್ಥ ಸೇವನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಪೊಲೀಸರು ಮಣಿಪಾಲದ ಆಸುಪಾಸಿನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಶಿವಳ್ಳಿ ಗ್ರಾಮದ ಮಣಿಪಾಲ ಓಪಲೆನ್ಸ್ ಅಪಾರ್ಟ್‌ಮೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವಿಕ್ರಮ್ (21) ಹಾಗೂ ಐನಾಬ್ ಡಯಾಸ್ (21) ಬಂಧಿತರು.
ಆರೋಪಿಗಳಿಬ್ಬರನ್ನು ಅ. 25 ರಂದು ಗಾಂಜಾ ಸೇವನೆ ಮಾಡುತಿದ್ದ ವೇಳೆ ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಗಾಂಜಾ ಸೇವನೆ ಮಾಡಿರುವ ಕೆಎಂಸಿಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಖಚಿತವಾಗಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.