ದೇವುಹನೆಹಳ್ಳಿಯ ‘ಮಾಯಕದ ನೆಲೆ’ ಪುಸ್ತಕ ಬಿಡುಗಡೆ

Update: 2019-11-09 14:55 GMT

ಮಂಗಳೂರು, ನ.9: ಮಂಗಳೂರು ವಿವಿ ಕಾಲೇಜ್‌ನ ಸ್ನಾತಕೋತ್ತರ ಹಿಂದಿ ವಿಭಾಗ, ಕಿನ್ನಿಗೋಳಿಯ ಗಾಯತ್ರಿ ಪ್ರಕಾಶನ ಅನಂತ ಪ್ರಕಾಶ, ಹನೆಹಳ್ಳಿ ಬಳಗ ಸೀತೆಯ ಎಡಬಲ ವತಿಯಿಂದ ಲೇಖಕ ದೇವು ಹನೆಹಳ್ಳಿ ಅವರ ‘ಮಾಯಕದ ನೆಲೆ’ ಪುಸ್ತಕದ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವು ಶನಿವಾರ ನಗರದ ವಿವಿ ಕಾಲೇಜ್‌ನ ರವೀಂದ್ರ ಕಲಾಭವನದಲ್ಲಿ ಜರುಗಿತು.

ನಾಗರಹೊಳೆಯ ನಿವೃತ್ತ ವಲಯ ಅರಣ್ಯಾಧಿಕಾರಿ ಕೆ.ಎಂ.ಚಿಣ್ಣಪ್ಪ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ‘ಸಭೆಯ ಸತ್ಯಗಳು’ ವಿಷಯಾಧಾರಿತ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ, ಚಿಂತಕರಾದ ಡಾ.ವಿವೇಕ ಧಾರೇಶ್ವೆರ, ಲಕ್ಷ್ಮೀಶ ತೋಳ್ಪಾಡಿ ಹಾಗೂ ಕೆ.ಎಂ.ಚಿಣ್ಣಪ್ಪ ವಿವಿಧ ಮಜಲುಗಳಲ್ಲಿ ವಿಷಯಗಳನ್ನು ಮಂಡಿಸಿದರು.

ಮಂಗಳೂರು ವಿವಿ ಕಾಲೇಜ್‌ನ ಪ್ರಾಂಶುಪಾಲ ಡಾ.ಉದಯ್ ಕುಮಾರ್ ಇರ್ವತ್ತೂರು, ಕಾಲೇಜ್‌ನ ಹಿಂದಿ ವಿಭಾಗದ ಮುಖ್ಯಸ್ಥ ಡಾ.ಸುಮಾ, ಗಾಯತ್ರಿ ಪ್ರಕಾಶನದ ಕೆ.ಸಚ್ಚಿದಾನಂದ ಉಡುಪ ಅತಿಥಿಗಳಾಗಿ ಭಾಗವಹಿಸಿದ್ದರು.

ಲೇಖಕ ದೇವು ಹನೆಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯಸ್ವರೂಪ ಪ್ರಾರ್ಥಿಸಿದರು. ಪ್ರಾಧ್ಯಾಪಕ ವಿಷ್ಣುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News