ಮಿಶಲ್ ಕ್ವೀನಿ ಡಿ'ಕೋಸ್ತಗೆ ಸುವರ್ಣ ಪದಕ

Update: 2019-11-10 16:07 GMT

ಮೂಡುಬಿದಿರೆ: ಮುಂಬೈಯಲ್ಲಿ ಕಸ್ಟಮ್ಸ್ ಮತ್ತು ಜಿಎಸ್‍ಟಿ  ವಿಭಾಗದಲ್ಲಿ  ಸಹಾಯಕ ಆಯುಕ್ತೆಯಾಗಿದ್ದು  ಸದ್ಯ ಪ್ರೊಬೇಶನರಿ ಅವಧಿಯಲ್ಲಿ  ತರಬೇತಿ ಪಡೆಯುತ್ತಿರುವ ನೀರುಡೆ ಮೂಲದ ಮಿಶಲ್ ಕ್ವೀನಿ ಡಿ'ಕೋಸ್ತ ಅವರು ತಮ್ಮ ತರಬೇತಿ ಅವಧಿಯಲ್ಲಿ ತೋರಿದ ಕ್ಷಮತೆಗಾಗಿ ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ `ಫೈನಾನ್ಸ್ ಮಿನಿಸ್ಟರ್ಸ್ ಗೋಲ್ಡ್ ಮೆಡಲ್ ಫಾರ್ ಆಲ್‍ರೌಂಡ್ ಎಕ್ಸಲೆನ್ಸ್' ಪುರಸ್ಕಾರಕ್ಕೆ  ಪಾತ್ರರಾಗಿದ್ದಾರೆ. 

ಫರೀದಾಬಾದ್‍ನಲ್ಲಿರುವ ನೇಶನಲ್ ಅಕಾಡೆಮಿ ಆಫ್ ಕಸ್ಟಮ್ಸ್, ಇನ್‍ಡೈರೆಕ್ಟ್ ಟ್ಯಾಕ್ಸಸ್ ಆ್ಯಂಡ್ ನರ್ಕೋಟಿಕ್ಸ್ ನಲ್ಲಿ  ನಡೆದ ಪಾಸಿಂಗ್ ಔಟ್ ಪೆರೇಡ್‍ನಲ್ಲಿ  ನಿರ್ಮಲಾ ಅವರಿಂದ ನ.8ರಂದು ಮಿಶಾಲ್ ಕ್ವೀನಿ ಡಿಕೋಸ್ತ ಅವರು ಈ ಸುವರ್ಣ ಪದಕ ಸ್ವೀಕರಿಸಿದರು.

ಈ ತರಬೇತಿಯಲ್ಲಿ ಇಂಡಿಯನ್ ರೆವೆನ್ಯೂ ಸರ್ವಿಸ್‍ನ  69ನೇ ತಂಡದ 102 ಮಂದಿ ಭಾಗವಹಿಸಿದ್ದರು. ಮಿಶಲ್  ಅವರು ನೀರುಡೆಯ ಕೃಷಿಕ, ಸಮಾಜ ಸೇವಕ ಲಾಝರಸ್ ಡಿ'ಕೋಸ್ತ -ನ್ಯಾನ್ಸಿ ಫೆಲ್ಸಿ ಡಿ'ಕೋಸ್ತ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News