ಎಚ್‌ಎಎಲ್ ನೌಕರರ ಮುಷ್ಕರಕ್ಕೆ ನಿರ್ಬಂಧ: ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ

Update: 2019-11-11 17:11 GMT

ಬೆಂಗಳೂರು, ನ.11: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಸಿಬ್ಬಂದಿ ಹಾಗೂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಕೆಗೆ ಏಕಸದಸ್ಯ ನ್ಯಾಯಪೀಠ ನಿರ್ಬಂಧ ವಿಧಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗಿದೆ.

ಅರ್ಜಿ ವಿಚಾರಣೆ ನ.18ಕ್ಕೆ ಮುಂದೂಡಿಕೆಯಾಗಿದೆ. ಎಚ್‌ಎಎಲ್ ಸಿಬ್ಬಂದಿ ಹಾಗೂ ನೌಕರರ ಸಂಘ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಸಿಬ್ಬಂದಿ, ನೌಕರರು ಪ್ರತಿಭಟನೆ ಮುಷ್ಕರ ಮತ್ತಿತರ ವಿಧಾನಗಳ ಮೂಲಕ ಕಂಪೆನಿಯ ದೈನಂದಿನ ಕಾರ್ಯ ಅಡ್ಡಿಪಡಿಸುವಂತಿಲ್ಲ. ಕೈಗಾರಿಕಾ ವ್ಯಾಜ್ಯಗಳ ಕಾಯ್ದೆ ಅಡಿ ರಾಜಿ ಪ್ರತಿಕ್ರಿಯೆ ನಡೆಯುತ್ತಿರುವಾಗ ಮುಷ್ಕರಕ್ಕೆ ಮುಂದಾಗುವುದು ನಿಷಿದ್ಧ. ರಾಜಿ ಅಧಿಕಾರ ವಿವಾದವನ್ನು ಬಗೆಹರಿಸಲು ಪ್ರಯತ್ನ ನಡೆಸಬೇಕು. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕೂಡ ವಿವಾದವನ್ನು ಬಗೆಹರಿಸಿಕೊಳ್ಳಲು ಸಹಕಾರ ನೀಡಬೇಕೆಂದು ಆದೇಶ ನೀಡಿದ್ದ ನ್ಯಾಯಪೀಠ, ಎಚ್‌ಎಎಲ್ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿತ್ತು. ಈಗ ಎಚ್‌ಎಎಲ್ ನೌಕರರು ಈ ಆದೇಶವನ್ನು ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News