ಬಜತ್ತೂರು ಗ್ರಾಪಂ ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ಗೆಲುವು

Update: 2019-11-14 08:14 GMT

ಪುತ್ತೂರು, ನ.14: ಬಜತ್ತೂರು ಗ್ರಾಮ ಪಂಚಾಯತ್‌ನಲ್ಲಿ ತೆರವಾಗಿದ್ದ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ಅವರು ಜಯಗಳಿಸಿದ್ದಾರೆ.

ಉಮೇಶ್ ಅವರು 487 ಮತಗಳನ್ನು ಪಡೆದುಕೊಂಡಿದ್ದು, ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರೀನಾ ಡಿಸೋಜ ಅವರಿಂದ 173 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರೀನಾ ಡಿಸೋಜ ಅವರಿಗೆ 314 ಮತಗಳು ಲಭಿಸಿದೆ. ಚುನಾವಣೆಯಲಿ 814 ಮತಗಳು ಚಲಾವಣೆಯಾಗಿದ್ದು, 13 ಮತಗಳು ತಿರಸ್ಕೃತಗೊಂಡಿದೆ.

ಗುರುವಾರ ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಚುನಾವಣಾ ಎಣಿಕೆ ಕಾರ್ಯ ನಡೆಯಿತು. ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಚುನಾವಣಾಧಿಕಾರಿಯಾಗಿ ಹಾಗೂ ಉಪತಹಸೀಲ್ದಾರ್ ಸದಾಶಿವ ನಾಯಕ್ ಸಹಾಯಕ ಚುನಾವಣಾಧಿಕಾರಿಯಾಗಿ ಎಣಿಕೆ ಪ್ರಕ್ರಿಯೆ ನಡೆಸಿದರು. ಈ ಕ್ಷೇತ್ರಕ್ಕೆ ನ.12ರಂದು ಚನಾವಣೆ ನಡೆದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News