​ಬುಲ್ ಟ್ರಾಲಿಂಗ್ ಮೀುಗಾರಿಕೆ: ಬೋಟು ಮಾಲಕರಿಗೆ ದಂಡ

Update: 2019-11-15 13:55 GMT

ಉಡುಪಿ, ನ.15: ನಿಷೇಧಿತ ಬುಲ್ ಟ್ರಾಲಿಂಗ್ ಮೀನುಗಾರಿಕೆ ಮಾಡು ತ್ತಿದ್ದ ಬೋಟಿನ ಮಾಲಕರಿಗೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ದಂಡ ವಿಧಿಸಿದ್ದಾರೆ.

ಕೋಡಿಬೆಂಗ್ರೆಯ ಕೃಷ್ಣ ಬಿ.ಕುಂದರ್ ಎಂಬವರ ತಿರುಮಲ ಹೆಸರಿನ ಯಾಂತ್ರೀಕೃತ ಮೀನುಗಾರಿಕಾ ಬೋಟು ಕರಾವಳಿ ಸಮುದ್ರದಲ್ಲಿ ಬುಲ್ ಟ್ರಾಲಿಂಗ್ ಮಾಡುತ್ತಿರುವ ಕುರಿತ ದೂರಿನಂತೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ವಿಚಾರಣೆ ನಡೆಸಿದ್ದು, ಇದರಲ್ಲಿ ಈ ಬೋಟ್ ನಿಷೇಧಿಸಲಾದ ಬುಲ್ ಟ್ರಾಲಿಂಗ್ ಕೈಗೊಂಡಿರುವುದು ಸಾಕ್ಷಾಧಾರಗಳಿಂದ ಸಾಬೀತಾಗಿತ್ತು.
ಆದುದರಿಂದ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣಾ ಕಾಯ್ದೆ ಸೆಕ್ಷನ್ 13ರಡಿ ಕೃಷ್ಣ ಬಿ.ಕುಂದರ್ ಎಂಬವರಿಗೆ 5000 ರೂ. ದಂಡ ವಿಧಿಸಲಾಗಿದೆ ಎಂದು ಉಡುಪಿ ಮೀನುಗಾರಿಕಾ ಉಪ ನಿರ್ದೇಶಕರು ಮತ್ತು ಮಧ್ಯಸ್ಥಗಾರ ಗಣೇಶ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೂರು ಅರ್ಜಿಗಳ ವಜಾ: ಪಡುಕೆರೆಯ ಹೇಮಾವತಿ ಎಂಬವರ ಮಣಿಕಂಠ ಮತ್ತು ಚೇರ್ಕಾಡಿಯ ಚಂದ್ರ ಮರಕಾಲ ಎಂಬವರ ವಾಯುಪುತ್ರ ಎಂಬ ಹೆಸರಿನ ಯಾಂತ್ರೀಕೃತ ಮೀನುಗಾರಿಕಾ ಬೋಟು ಕರಾವಳಿಯಲ್ಲಿ ನಿಷೇಧಿತ ಬುಲ್ ಟ್ರಾಲಿಂಗ್ ಮೀನುಗಾರಿಕೆ ನಡೆಸುತ್ತಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ವಿಚಾರಣೆ ನಡೆಸಿದ್ದರು.

ಈ ಬೋಟ್ ಮೂಲಕ ಬುಲ್ ಟ್ರಾಲಿಂಗ್ ಕೈಗೊಂಡಿರುವುದನ್ನು ಸಾಕ್ಷಿ ಆಧಾರಗಳ ಮೂಲಕ ರುಜುವಾತುಗೊಳಿಸಲು ವಿಫಲವಾಗಿರುವುದರಿಂದ ಈ ಅರ್ಜಿಯನ್ನು ವಜಾಗೊಳಿಸಲಾಗಿದೆ ಹಾಗೂ ವಿಚಾರಣೆ ಸಮಯದಲ್ಲಿ ತಾತ್ಕಾಲಿಕವಾಗಿ ಡಿಸೇಲ್ ತಡೆ ಹಿಡಿಯಲಾದ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ಉಡುಪಿ ಮೀನುಗಾರಿಕಾ ಉಪನಿರ್ದೇಶಕರು ಮತ್ತು ಮಧ್ಯಸ್ಥಗಾರ ಗೇಶ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News