ಸಹಾಯಧನಕ್ಕೆ ಅರ್ಜಿ ಆಹ್ವಾನ

Update: 2019-11-20 15:37 GMT

ಉಡುಪಿ, ನ.20: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಕೆಳಗಿನ ಯೋಜನೆಗಳಿಗೆ ಸಹಾಯಧನ ನೀಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸ ಲಾಗಿದೆ.

2018-19ನೇ ಸಾಲಿನಲ್ಲಿ ವಿವಿಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡ ದಲ್ಲಿ ಎಂಫಿಲ್ ಪದವಿ ಪಡೆದ ಪ್ರೌಢ ಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಸಹಾಯಧನ. 2018-19ನೇ ಸಾಲಿನಲ್ಲಿ ವಿವಿಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಪಿಹೆಚ್‌ಡಿ ಪದವಿ ಪಡೆದ ಮಹಾಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಸಹಾಯಧನ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 2018-19ನೇ ಸಾಲಿನಲ್ಲಿ ಪ್ರಕಟಿತ ಸೃಜನೇತರ ಕನ್ನಡ ಗ್ರಂಥಗಳಿಗೆ ಸಹಾಯಧನ ನೀಡಲಾಗುವುದು.

ಕನ್ನಡದಲ್ಲಿ ಪಿಹೆಚ್‌ಡಿ ಮತ್ತು ಎಂಫಿಲ್ ಪ್ರೌಢ ಪ್ರಬಂಧಗಳ ಹಸ್ತಪ್ರತಿ ಮುದ್ರಣಕ್ಕೆ ಸಹಾಯಧನ ಯೋಜನೆಗಾಗಿ ಇಲಾಖೆಯ ವೆಬ್‌ಸೈಟ್ -www.kannadasiri.in-ನಲ್ಲಿ ಡಿ.14ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಯನ್ನು ಸಲ್ಲಿಸಬಹುದಾಗಿದೆ.

ಸಾಮಾನ್ಯ ವರ್ಗದ ಅಭ್ಯರ್ಥಿಗಳು 2018-19ನೇ ಸಾಲಿನಲ್ಲಿ ಪ್ರಕಟಿತ ಸೃಜನೇತರ ಕನ್ನಡ ಗ್ರಂಥಗಳಿಗೆ ಸಹಾಯಧನ ಯೋಜನೆಗಾಗಿ ಇಲಾಖೆಯ ವೆಬ್‌ಸೈಟ್ -www.kannadasiri.in-ನಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ಇಲಾಖೆಗೆ ಡಿ.14ರೊಳಗೆ ಸಲ್ಲಿುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News