ರಸ್ತೆ ವಿಭಜಕಕ್ಕೆ ಢಿಕ್ಕಿ: ಇಬ್ಬರು ಸವಾರರಿಗೆ ಗಾಯ
Update: 2019-11-21 16:21 GMT
ಮಂಗಳೂರು, ನ.21: ನಗರದ ಕೊಟ್ಟಾರ ಚೌಕಿಯಿಂದ ಉರ್ವಸ್ಟೋರ್‌ಗೆ ಬುಧವಾರ ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಸ್ಥಳೀಯ ನಿವಾಸಿಗಳಾದ ಸವಾರ ಸುಹೇಬ್ ಹಾಗೂ ಸಹಸವಾರ ಮಂಥನ್ ಗಾಯಾಳುಗಳು. ಜಿಪಂ ಮುಖ್ಯದ್ವಾರದ ಎದುರು ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಸುಹೇಬ್‌ಗೆ ಬಲಕಣ್ಣಿನ ಬಳಿ ಮತ್ತು ತಲೆಗೆ ಗುದ್ದಿದ ಗಾಯವಾಗಿದೆ. ಮಂಥನ್‌ಗೆ ಗಲ್ಲಕ್ಕೆ ತೀವ್ರ ಸ್ವರೂಪದ ಗಾಯವಾಗಿದೆ. ಅವರನ್ನು ಕಾರಿನ ಚಾಲಕರೊಬ್ಬರು ಚಿಕಿತ್ಸೆಗೆ ನಗರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಈ ಕುರಿತು ಮಂಗಳೂರು ನಗರ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.