ಸಂಗೀತ, ಸಾಹಿತ್ಯದಿಂದ ಸಾಧನೆಯ ಗುರಿ ಮುಟ್ಟಲು ಸಾಧ್ಯ: ನಾದ ವೈಭವಂ ವಾಸುದೇವ ಭಟ್

Update: 2019-11-24 16:36 GMT

ಮಲ್ಪೆ, ನ.24: ಸಂಗೀತ ಮತ್ತು ಸಾಹಿತ್ಯವನ್ನು ಏಕಾಗ್ರತೆಯಿಂದ ಹೆಚ್ಚು ಕ್ರೆಯಾಶೀಲರಾಗಿ ಅಭ್ಯಸಿಸಿದಾಗ ಜೀವನದಲ್ಲಿ ಸಾಧನೆಯ ಗುರಿ ಮುಟ್ಟ ಬಹುದು. ಸಂಗೀತ ಸಾಹಿತ್ಯವನ್ನು ಹೆಚ್ಚು ಆಯೋಜಿಸುವ ಮೂಲಕ ಕಲಾ ವಿದರನ್ನು ಪ್ರೋತ್ಸಾಹಿಸುವ ಕೆಲಸವೂ ಆಗಬೇಕು ಎಂದು ಸಂಗೀತ ವಿದ್ವಾಂಸ ಉಡುಪಿ ನಾದ ವೈಭವಂನ ವಾಸುದೇವ ಭಟ್ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಘಟಕ, ಮಣೂರು ಗೀತಾನಂದ ಫೌಂಡೇಶನ್, ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡವೂರು ಉಡುಪ ರತ್ನ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ರವಿವಾರ ಕೊಡವೂರು ಭಾಮ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾದ ಮನೆಯಂಗಳ ದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಥೆ, ಕಾವ್ಯ ಹುಟ್ಟುವ ಸಮಯ ಎಂಬ ವಿಷಯದ ಕುರಿತು ಮಾತನಾಡಿದ ಸಾಹಿತಿ, ವಿಮರ್ಶಕ ಬೆಳಗೋಡು ರಮೇಶ್ ಭಟ್, ಕವಿತೆ ಹುಟ್ಟಲು ನಿರ್ದಿಷ್ಟ ಸಮಯ ಎಂಬುದು ಇಲ್ಲ. ಆಯಾ ಕಾಲದ, ಆಯಾ ಸಂದರ್ಭದ ಒತ್ತಡ, ಸಂಭ್ರಮ, ವಿಷಾದಗಳಲ್ಲಿ ಕವಿತೆ ಹುಟ್ಟಿಕೊಳ್ಳುತ್ತದೆ. ಪುರಾಣ ಕಾಲದ ಕತೆಗಳು ಇವತ್ತಿನ ಘಟನೆಗಳಿಗೆ ಸಮೀಪಿಕರಿಸಿದಾಗಲೂ ಕತೆ ಹುಟ್ಟಿಕೊಳ್ಳುತ್ತದೆ ಎಂದರು.

ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ವಿಜಯ ಕೊಡವೂರು, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪ ಬ್ರಹ್ಮಾವರ ಘಟಕದ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಉಡುಪಿ ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ಸಾಹಿತಿ ಅಗ್ರಹಾರ ಭಾಸ್ಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಪೂರ್ಣಿಮಾ ಜನಾರ್ದನ ಸ್ವಾಗತಿಸಿದರು. ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಮುರಳೀಧರ ಆಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News