ಟೆಂಪರೇಚರ್ ಲಾಗರ್‌ಗಳಿಗೆ ಚಾಲನೆ

Update: 2019-11-25 14:31 GMT

ಉಡುಪಿ, ನ.25:ಜಿಲ್ಲೆಯಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಬಲಪಡಿಸುವ ನಿಟ್ಟಿನಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯ ಜಿಲ್ಲಾ ಲಸಿಕಾ ಉಗ್ರಾಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶೋಕ್ ಹಾಗೂ ಜಿಲ್ಲಾ ಪ್ರಬಾರ ಆರ್‌ಸಿಹೆಚ್ ಅಧಿಕಾರಿ ರಾಮರಾವ್, ಐಎಲ್‌ಆರ್ ಮತ್ತು ಡೀಪ್ ಫ್ರೀಝರ್‌ಗೆ ಅಳವಡಿಸಿದ ಟೆಂಪರೇಚರ್ ಲಾಗರ್‌ಗಳನ್ನು ಉದ್ಘಾಟಿಸುವ ಮೂಲಕ ಚಾಲನೆಯನ್ನು ನೀಡಿದರು.

2018ರ ನವೆಂಬರ್ ತಿಂಗಳಿನಿಂದ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ಯುನೈಟೆಡ್ ನೇಷನ್ಸ್ ಡೆವಲಪ್‌ಮೆಂಟ್ ಪ್ರೋಗ್ರಾಮ್ ಇವರ ಸಹಾಯ ದಿಂದ ಇ-ವಿನ್ (e-VIN) ಅಂದರೆ ವಿದ್ಯುನ್ಮಾನ ಲಸಿಕೆ ಮಾಹಿತಿ ಜಾಲದಡಿಯಲ್ಲಿ ಲಸಿಕೆ ಹಾಗೂ ಸಿರಿಂಜ್ ವಿತರಣೆ ಮಾಡಲಾಗುತ್ತದೆ.

ಇ-ವಿನ್ ಅಡಿಯಲ್ಲಿ ಲಸಿಕೆ, ಸಿರಿಂಜ್‌ಗಳು ಎಲ್ಲಾ ಶೀತಲ ಸರಪಣಿ (ಕೋಲ್ಡ್ ಚೈನ್) ಕೇಂದ್ರಗಳಲ್ಲಿ ನಿಖರವಾಗಿ ಲಭ್ಯತೆ, ಸರಬರಾಜು, ವಿತರಣೆಯಾಗುತ್ತಿದೆ. ಈ ವ್ಯವಸ್ಥೆಯಡಿಯಲ್ಲಿ ಯಾವ ಕೇಂದ್ರದಲ್ಲಿಯೂ ಲಸಿಕೆ ಕೊರತೆಯಾಗದಂತೆ ಫಲಾನು ಭವಿಗಳಿಗೆ ದೊರೆಯುತಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನ. 20ರಂದು 4 ಟೆಂಪರೇಚರ್ ಲಾಗರ್‌ಗಳನ್ನು ಐಎಲ್‌ಆರ್ ಮತ್ತು ಡೀಪ್ ಫ್ರೀಝರ್‌ಗೆ ಅಳವಡಿಸಲಾಗಿದೆ. ಈ ಯಂತ್ರದ ಅಳವಡಿಕೆಯಿಂದ ಐಎಲ್‌ಆರ್ ಮತ್ತು ಡೀಪ್ ಫ್ರೀಝರ್‌ನ ಉಷ್ಣತೆಯ ದಾಖಲೆಯನ್ನು ಆನ್‌ಲೈನ್ ಮೂಲಕ ಜಿಲ್ಲೆ/ ಬೆಂಗಳೂರು/ ದೆಹಲಿಯಲ್ಲಿ ಮೇಲಾಧಿಕಾರಿ ಗಳು ನೋಡಬಹುದಾಗಿದೆ. ಯಾವ ಜಿಲ್ಲೆಯ ಯಾವ ಕೇಂದ್ರದ ಐಎಲ್‌ಆರ್ ಮತ್ತು ಡೀಪ್ ಫ್ರೀಝರ್‌ನ ಉಷ್ಣತೆಯಲ್ಲಿ ವ್ಯತ್ಯಾಸವಾದರೂ ವಾಹಿತಿ ಪಡೆದು ಸರಿಪಡಿಸಬಹುದಾಗಿದೆ.

ಜಿಲ್ಲೆಯಲ್ಲಿರುವ ಶೀತಲ ಸರಪಣೆ ಕೇಂದ್ರದಲ್ಲಿ (ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ ಕೇಂದ್ರ/ ತಾಲೂಕು ಆಸ್ಪತ್ರೆ/ ಜಿಲ್ಲಾ ಆಸ್ಪತ್ರೆ) ಟೆಂಪರೇಚರ್ ಲಾಗರ್ ಅಳವಡಿಸುವ ಕಾರ್ಯವು ನ.20ರಿಂದ ನಿರಂತರವಾಗಿ ನಡೆಯುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ಶೀತಲ ಸರಪಣೆ ಕೇಂದ್ರಗಳಲ್ಲಿ ಟೆಂಪರೇಚರ್ ಲಾಗರ್ ಅಳವಡಿಕೆಯು ಪೂರ್ಣಗೊಳ್ಳಲಿದೆ.

ಯುಎನ್‌ಡಿಪಿ, ನೇಷನಲ್ ಪಿಒ-ಐಟಿ ಮೈಸೂರು ವಿಬಾಗದ ಯುಎನ್‌ಡಿಪಿ, ಪಿಒ ಡಾ.ಸ್ವಪ್ನಿಲ್ ನಿಮ್ಕರ್, ಟೆಂಪರೇಚರ್ ಲಾಗರ್‌ನ ಕಾರ್ಯನಿರ್ವಹಣೆ ಹಾಗೂ ಉಪಯೋಗದ ಬಗ್ಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News