ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಿ: ಸುಬ್ರಹ್ಮಣ್ಯ ಜೋಯಿಸ್

Update: 2019-11-25 14:55 GMT

ಕುಂದಾಪುರ, ನ.25: ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಶಾಲೆಯಲ್ಲಿ ನ.23ರಂದು ರಕ್ಷಕ-ಶಿಕ್ಷಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸುಬ್ರಹ್ಮಣ್ಯ ಜೋಯಿಸ್ ಮಾತನಾಡಿ, ಪೊಷಕರು ದಿನವಿಡೀ ತಮ್ಮ ಕೆಲಸದಲ್ಲಿ ತೊಡಗಿಸಿ ಕೊಳ್ಳದೆ ಸ್ವಲ್ಪಹೊತ್ತು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳಿಗೋಸ್ಕರ ಪ್ರತ್ಯೇಕ ಆಸ್ತಿ ಮಾಡುವುದು ಬೇಡ. ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು ಹಾಗೂ ಅವರನ್ನು ದೇಶದ ಉತ್ತಮ ಪ್ರ ಜೆಯನ್ನಾಗಿ ರೂಪಿಸಬೇಕು ಎಂದರು.

ವೇದಿಕೆಯಲ್ಲಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಬ್ಯಾರಿ, ನಿರ್ದೇಶಕ ದೋಮ ಚಂದ್ರಶೇಖರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್, ಶಾಲಾ ಪ್ರಾಂಶುಪಾಲೆ ಫಿರ್ದೋಸ್, ಶಾಲಾ ಸಂಯೋಜಕಿ ಅಶ್ವಿನಿ ಶೆಟ್ಟಿ, ಶಾಲಾಭಿವೃದ್ಧಿ ಮಂಡಳಿಯ ಸದಸ್ಯರಾದ ಪ್ರಕಾಶ್, ರಫೀಕ್ ಉಪಸ್ಥಿತರಿದ್ದರು.

ಜೆನಿಫರ್ ಸ್ವಾಗತಿಸಿದರು. ನಾಝಿಯಾ ಶರೂನ್ ವಂದಿಸಿದರು. ಸುಶೀಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News