ನ.28ರಂದು ಆಲಡ್ಕದಲ್ಲಿ ಹಾಫಿಳ್ ತೌಸೀಫ್ ಹಿಮಮಿ ಅನುಸ್ಮರಣಾ ಸಮಾವೇಶ
Update: 2019-11-25 16:59 GMT
ಬಂಟ್ವಾಳ, ನ.25: ಮುಹಿಮ್ಮಾತ್ ಓಲ್ಡ್ ಸ್ಟೂಡೆಂಟ್ಸ್, ಕರ್ನಾಟಕ ಹಾಗೂ ಎಸ್ಸೆಸ್ಸೆಫ್ ಆಲಡ್ಕ ಶಾಖೆ ವತಿಯಿಂದ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣಹೊಂದಿದ ಹಾಫಿಳ್ ತೌಸೀಫ್ ಹಿಮಮಿ ಉಸ್ತಾದರ ಅನುಸ್ಮರಣಾ ಸಮಾವೇಶವು ನ.28 ರಂದು ಗುರುವಾರ ಮದ್ಯಾಹ್ನ 3 ಗಂಟೆಗೆ ಆಲಡ್ಕ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ಸೆಯ್ಯದು ಮುನೀರುಲ್ ಅಹ್ದಲ್ ಮುಹಿಮ್ಮಾತ್ ಸಮಾರಂಭದ ನೇತೃತ್ವ ವಹಿಸಲಿದ್ದು, ಸೆಯ್ಯದ್ ಶರಫುದ್ದೀನ್ ಹಿಮಮಿ ಅಲ್ ಹೈದ್ರೋಸಿ, ಎರುಮಾಡ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ.ಎಂ ಮುಸ್ತಫ ಹಿಮಮಿ ನಈಮಿ, ಮೋಂಟುಗೋಳಿ ಅನುಸ್ಮರಣಾ ಭಾಷಣ ನಡೆಸಲಿದ್ದು, ಅಶ್ರಫ್ ಸಖಾಫಿ ಸವಣೂರು, ಮುಝಮ್ಮಿಲ್ ಸಖಾಫಿ ಸೇರಿ ಹಲಾವರು ನಾಯಕರು, ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.