ಮಗುವಿನ ಜತೆ ತಾಯಿ ನಾಪತ್ತೆ

Update: 2019-11-25 17:13 GMT

ಉಳ್ಳಾಲ: ಎರಡು ವರ್ಷದ ಮಗುವಿನ ಜತೆ ತಾಯಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕೊಲ್ಯ ಕುಂಪಲ ಎಂಬಲ್ಲಿ ಶನಿವಾರ ನಡೆದಿದ್ದು, ಸೋಮವಾರ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ: ಕೊಲ್ಯ ಕುಂಪಲ ನಿವಾಸಿ ಉಮೇಶ್ ಎಂಬವರ ಪತ್ನಿ  ರಶ್ಮಿ(22) ಎಂಬವರು ಜ.23ರಂದು ನಾಪತ್ತೆಯಾಗಿದ್ದರು. ಗಂಡ ಉಮೇಶ್ ಬೇಕರಿಯೊಂದನ್ನು ಹೊಂದಿದ್ದು, ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ಬೇಕರಿಗೆ ಹೋಗಿದ್ದರು. ನ.23ರಂದು ಬೇಕರಿ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ರಶ್ಮಿ, ಎರಡು ವರ್ಷದ ಮಗು ಮೋನಿಷಾ ಜತೆ ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಆವರ ತಾಯಿ ಮತ್ತು ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಪತ್ತೆಯಾಗದ ಹಿನ್ನೆಲೆಯಲ್ಲಿ ಉಮೇಶ್ ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News