ಡಿ.2-5: ದಕ್ಷಿಣ ವಲಯ ಅಂತರ್ ವಿವಿ ಮಹಿಳಾ ಬ್ಯಾಡ್ಮಿಂಟನ್

Update: 2019-11-26 15:01 GMT

ಮಣಿಪಾಲ, ನ.26:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಏಜ್ಯು ಕೇಶನ್ (ಮಾಹೆ) ಆಶ್ರಯದಲ್ಲಿ ಹೊಸದಿಲ್ಲಿಯ ಭಾರತೀಯ ವಿವಿಗಳ ಸಂಸ್ಥೆಯ ಸಹಯೋಗದಲ್ಲಿ 2019-20ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯನ್ನು ಡಿ.2ರಿಂದ 5ರವರೆಗೆ ಮಣಿಪಾಲದ ಮರೀನಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಮಣಿಪಾಲದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಈ ಕ್ರೀಡಾಕೂಟದಲ್ಲಿ ದಕ್ಷಿಣ ವಲಯದ 88 ವಿವಿಗಳ 500 ಕ್ರೀಡಾಪಟುಗಳು, 100 ತಂಡ ವ್ಯವಸ್ಥಾಪಕರು ಮತ್ತು ತರಬೇತುದಾರರು ಭಾಗವಹಿಸಲಿದ್ದಾರೆ ಎಂದರು.

ಕ್ರೀಡಾಕೂಟದ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ಅಧಿಕಾರಿಗಳು ಹಾಗೂ ಕ್ರೀಡಾಪಟುಗಳಿಗೆ ಎಂಐಟಿ ಹಾಗೂ ಹೆಲ್ತ್ ಸೈನ್ಸ್ನ ಮಹಿಳಾ ವಸತಿ ನಿಲಯ ದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಪಂದ್ಯಕೂಟ ನಾಕೌಟ್ ಮಾದರಿಯಲ್ಲಿ ನಡೆಯಲಿದೆ. ಡಿ.3ರಂದು ಬೆಳಗ್ಗೆ 9:30ಕ್ಕೆ ಕ್ರೀಡಾಕೂಟವನ್ನು ದಕ್ಷಿಣ ಏಷ್ಯಾ ಗೇಮ್ಸ್ನ ಚಿನ್ನದ ಪದಕ ವಿಜೇತ ಕ್ರೀಡಾಪಟು ತೃಪ್ತಿ ಮುರ್ಗುಂಡೆ ಉದ್ಘಾಟಿಸ ಲಿರುವರು. ಅಧ್ಯಕ್ಷತೆಯನ್ನು ಎಚ್.ಎಸ್.ಬಲ್ಲಾಳ್ ವಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಮಾಹೆ ಕುಲಪತಿ ಡಾ.ವಿನೋದ್ ಭಟ್, ಪ್ರೊ ಚಾನ್ಸೆಲರ್ ಡಾ.ಪೂರ್ಣಿಮಾ ಬಾಳಿಗಾ, ಪಿ.ಎಲ್.ಎನ್.ಜಿ. ರಾವ್, ಎಂಐಟಿ ನಿರ್ದೇಶಕ ಶ್ರೀಕಾಂತ್ ರಾವ್, ಡಾ.ವಿನೋದ್ ನಾಯಕ್, ಡಾ.ಶೋಭಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News