​ಯೋಗ ಶಿಬಿರದಿಂದ ಜಿಲ್ಲೆಯಲ್ಲಿ ಜಾಗೃತಿ: ಪಲಿಮಾರು ಶ್ರೀ

Update: 2019-11-26 17:01 GMT

ಉಡುಪಿ, ನ.26: ಬಾಬಾ ರಾಮ್‌ದೇವ್ ಅವರ 5 ದಿನಗಳ ಯೋಗ ಶಿಬಿರ ಜಿಲ್ಲೆಯಲ್ಲಿ ಯೋಗದ ಬಗ್ಗೆ ವ್ಯಾಪಕ ಜನಜಾಗೃತಿಗೆ ಕಾರಣವಾಗಿದ್ದು, ಇದರಿಂದಾಗಿ ಮಧ್ವಾಂಗಣದಲ್ಲಿ ಪ್ರತಿದಿನ ಬೆಳಗ್ಗೆ ನಡೆಯುವ ಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮಂಗಳವಾರ ಕನಕ ಮಂಟಪದಲ್ಲಿ ಪರ್ಯಾಯ ಪಲಿಮಾರು ಮಠ, ಪತಂಜಲಿ ಯೋಗ ಸಮಿತಿ, ಭಾರತ್ ಸ್ವಾಭಿಮಾನ್ ಟ್ರಸ್ಟ್ ವತಿಯಿಂದ ಶಿಬಿರದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.

ಬಾಬಾ ಅವರು ಯೋಗ ಶಿಬಿರದಲ್ಲಿ ಸಕ್ಕರೆ ಮತ್ತು ಮೈದಾನ ಆರೋಗ್ಯಕ್ಕೆ ಹಾನಿಕಾರಕ ಎಂದಿದ್ದರು. ಆದರೆ ಸಕ್ಕರೆ ಬಳಸಿದ ಪ್ರಸಾದವನ್ನು ಮಠದಲ್ಲಿ ನೀಡಿದರೆ ಭಕ್ತರಿಗೆ ಗೊಂದಲವಾಗುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೃಷ್ಣ ಮಠದಲ್ಲಿ ಸಕ್ಕರೆ ಮತ್ತು ಮೈದಾ ಬಳಕೆ ಸಂಪೂರ್ಣ ನಿಷೇಧಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News