ಬಾಲಕಿಯರಿಬ್ಬರು ನಾಪತ್ತೆ
Update: 2019-11-26 17:15 GMT
ಕಾರ್ಕಳ, ನ. 26: ಕುಕ್ಕುಂದೂರು ಗ್ರಾಮದ ಹುಡ್ಕೋ ಕಾಲೋನಿಯ ಬಾಡಿಗೆ ಮನೆಯ ನಿವಾಸಿ ಪರ್ವಿಜ್ ಎಂಬವರ ಸಹೋದರಿಯರಾದ ನಾಝಿಯ(14) ಹಾಗೂ ಮೆಹಕ್ತಾಝ್ (8) ಎಂಬವರು ನ.25ರಂದು ಸಂಜೆ ವೇಳೆ ನಾಪತ್ತೆಯಾಗಿದ್ದಾರೆ.
ಇವರು ಕೈಯಲ್ಲಿ ಚೀಲ ಹಿಡಿದುಕೊಂಡು ಮನೆಯಿಂದ ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ನಾಜಿಯ ಹಳದಿ ಬಣ್ಣದ ಟಾಪ್, ಕಪ್ಪುಬಣ್ಣದ ಪ್ಯಾಂಟ್ ಧರಿಸಿದ್ದು, ಮೆಹಕ್ತಾಝ್ ಬಿಳಿ ಬಣ್ಣದ ಟಾಪ್, ಹಳದಿ ಬಣ್ಣದ ಪ್ಯಾಂಟ್ ಧರಿಸಿದ್ದಳು. ಇವರಿಬ್ಬರು ಕನ್ನಡ, ಹಿಂದಿ, ಉರ್ದು ಭಾಷೆ ಮಾತನಾಡುತ್ತಿದ್ದು, ನಾಜಿಯ ಸುಮಾರು ನಾಲ್ಕೂವರೆ ಅಡಿ ಎತ್ತರ ಇದ್ದು ಸಾಧಾರಣ ಶರೀರ ಹೊಂದಿದ್ದರೆ, ಮೆಹಕ್ತಾಝ್ ಸುಮಾರು 3 ಅಡಿ ಎತ್ತರ ಇದ್ದು ತೆಳ್ಳಗಿದ್ದು ಕಪ್ಪಾಗಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.