ಸಿಬಿಎಸ್ಇ ರಾಷ್ಟ್ರ ಮಟ್ಟದ ಈಜು ಸ್ಪರ್ಧೆ: ಯೆನೆಪೊಯ ಶಾಲೆ ವಿದ್ಯಾರ್ಥಿಗೆ ಪ್ರಶಸ್ತಿ

Update: 2019-11-26 17:46 GMT

ಮಂಗಳೂರು : ಮಧ್ಯ ಪ್ರದೇಶದ ಭೋಪಾಲ್ ನಲ್ಲಿ ನಡೆದ ಸಿಬಿಎಸ್ಇ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಯೆನೆಪೊಯ ಶಾಲೆಯ ವಿದ್ಯಾರ್ಥಿ ವಾಫಿ ಅಬ್ದುಲ್ ಹಕೀಂ 50 ಮೀಟರ್ ಫ್ರೀ ಸ್ಟೈಲ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಇವರು ರಾಜೇಶ್ ಬೆಂಗ್ರೆ ಮತ್ತು ಯಶೋಧ ಜಿ ಭಂಡಾರಿ ಅವರಿಂದ ತರಬೇತಿ ಪಡೆದಿರುತ್ತಾರೆ. ಇವರನ್ನು ಶಾಲಾ ಪ್ರಾಂಶುಪಾಲರಾದ ಜೋಸೆಫ್ ಮೆಚಿರಾತ್, ಶಾಲಾ ಕ್ಯಾಂಪಸ್ ನಿರ್ದೇಶಕಿ ಮಿಶ್ರಿಯಾ ಜಾವೆದ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News