ಎನ್‌ಎಂಪಿಟಿಗೆ ಮತ್ತೊಂದು ಪ್ರವಾಸಿ ಹಡಗು ಆಗಮನ
Update: 2019-11-27 16:43 GMT
ಮಂಗಳೂರು, ನ. 27: ನವಮಂಗಳೂರು ಬಂದರಿಗೆ ಹಾಲಿ ವರ್ಷದ 6ನೆ ಪ್ರವಾಸಿಗರ ಹಡಗು ‘ಮೆರಿಲ್ಲಾ ಡಿಸ್‌ಕವರ್ ’ ಇಂದು ಗೋವಾದ ಮರ್ವ್‌ಗೋವಾ ಬಂದರಿನಿಂದ ಆಗಮಿಸಿದೆ.
1436 ಪ್ರವಾಸಿಗರು ಹಾಗೂ 716 ಸಿಬ್ಬಂದಿಗಳನ್ನು ಒಳಗೊಂಡ ಪ್ರವಾಸಿ ಹಡುಗು ಮಂಗಳೂರಿಗೆ ಆಗಮಿಸಿದಾಗ ಅವರಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಈ ಪೈಕಿ 690 ಪ್ರವಾಸಿಗರು ಮಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲು ಮುಂಗಡ ಟಿಕೇಟ್ ಬುಕ್ ಮಾಡಿದ್ದಾರೆ. ಮಂಗಳೂರಿನ ಪ್ರವಾಸಿ ಸ್ಥಳಗಳನ್ನು ಪ್ರವಾಸಿಗರು ಸಂದರ್ಶಿಸಿದ ಬಳಿಕ ಹಡಗು ಕೇರಳದ ಕೊಚ್ಚಿನ್ ಬಂದರಿಗೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.