ಋಣ ಮುಕ್ತ ಹೋರಾಟ ಸಮಿತಿಯಿಂದ ಪ್ರತಿಭಟನಾ ಸಭೆ

Update: 2019-11-28 10:19 GMT

ಮಂಗಳೂರು, ನ. 28: ದಕ್ಷಿಣ ಕನ್ನಡ ಋಣ ಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಕಿರು ಹಣ ಕಾಸು ಸಂಸ್ಥೆ ಗಳ (ಮೈಕ್ರೋ ಫೈನಾನ್ಸ್) ಸಾಲವನ್ನು ಮನ್ನಾ ಮಾಡಬೇಕು ಮತ್ತು  ಹೆಚ್ಚು ಬಡ್ಡಿ ವಸೂಲು ಮಾಡಿ ಶೋಷಣೆ ಮಾಡುತ್ತಿರುವ  ಸಂಸ್ಥೆಗಳನ್ನು ಸ್ಥಗಿತಗೊಳಿಸಿ, ಸರಕಾರವೇ ಕಿರು ಹಣಕಾಸು ಸಂಸ್ಥೆ ಗಳನ್ನು ನಡೆಸುವಂತಾಗಬೇಕು ಎಂದು ಒತ್ತಾಯಿಸಿ ನಗರದ ನೆಹರು ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಿತು.

ದೇಶದ ಬಡವರ ಮೇಲೆ ಇರುವ ಸಾಲ ಮತ್ತು ಬಡ್ಡಿ ಹೊರೆಯಿಂದ ಮುಕ್ತರನ್ನಾಗಿ ಮಾಡುವುದು ನಿಜವಾದ ದೇಶ ಭಕ್ತಿ ಎಂದು ಋಣ ಮುಕ್ತ ಹೋರಾಟ ಸಮಿತಿಯ ಮುಖಂಡ ಬಿ.ಎಂ.ಭಟ್ ತಿಳಿಸಿದ್ದಾರೆ.

ಸರಕಾರದ ಮೈಕ್ರೋ ಫೈನಾನ್ಸ್ ಕಾಯಿದೆಯ ಪ್ರಕಾರ ಆದಾಯ ತೆರಿಗೆ ವಿನಾಯಿತಿ ಪಡೆದು ಅದನ್ನು ಫಲಾನುಭವಿಗಳಿಗೆ ನೀಡದೆ ಸಾಲ ನೀಡಿ ದೊಡ್ಡ ಮೊತ್ತದ ಬಡ್ಡಿಯನ್ನು ವಸೂಲು ಮಾಡಿ ಶೋಷಣೆ ಮಾಡುತ್ತಿವೆ. ಬಡವರನ್ನು, ಮಹಿಳೆಯರನ್ನು ಸ್ವಾವಲಂಬಿ ಗಳನ್ನಾಗಿ ಮಾಡಬೇಕಾದ ಈ ಸಂಸ್ಥೆ ಗಳು ಜನರನ್ನು ಶೋಷಿಸುತ್ತಿವೆ. ಈ ವಂಚನೆಯನ್ನು ನಿಲ್ಲಿಸಲು ಸರಕಾರ ತಕ್ಷಣ ಮಧ್ಯ ಪ್ರವೇಶ ಮಾಡಬೇಕು ಎಂದು ಬಿ.ಎಂ.ಭಟ್ ತಿಳಿಸಿದ್ದಾರೆ.

ರಾಜ್ಯದಲ್ಲಿ 32 ಕಿರುಹಣಕಾಸು ಸಂಸ್ಥೆಗಳ ಮೂಲಕ 24,548 ಕೋಟಿ ರೂಗಳನ್ನು ಬಡವರಿಗೆ ಸಾಲ ನೀಡಿ 21ರಿಂದ 26ಶೇ ದವರೆಗೆ ಬಡ್ಡಿ ವಸೂಲಿ ಮಾಡಿ ಶೋಷಿಸುತ್ತಿವೆ. ಬಲವಂತವಾಗಿ ಸಾಲ ವಸೂಲಿ ಮಾಡಲಾಗುತ್ತಿದೆ.ಈ ರೀತಿಯ ಶೋಷಣೆ ಯನ್ನು ಕೊನೆಗೊಳಿಸಲು ಸರಕಾರ ಮಧ್ಯ ಪ್ರವೇಶ ಮಾಡಿ ಮೈಕ್ರೋ ಫೈನಾನ್ಸ್ ನ ಸಾಲ ಮನ್ನಾ ಮಾಡಬೇಕು ಎಂದು ಜೆಡಿಎಸ್ ರಾಜ್ಯ ಮುಖಂಡ ಎಂ.ಬಿ.ಸದಾಶಿವ ತಿಳಿಸಿದ್ದಾರೆ.

ಸಂವಿಧಾನದ ಮಾರ್ಗದ ಮೂಲಕ ಮೈಕ್ರೋ ಫೈನಾನ್ಸ್ ಗಳ ಶೋಷಣೆ ಯನ್ನು ಎದುರಿಸ ಬೇಕು ಎಂದು ದ.ಸಂ.ಸ ಮುಖಂಡ ನೇಮಿರಾಜ್ ತಿಳಿಸಿದ್ದಾರೆ.

 ರಾಜ್ಯದಾದ್ಯಂತ ನೆರೆ ಹಾವಳಿಯಿಂದ ಕೂಲಿ ಕಾರ್ಮಿಕ ರಿಗೆ ಮತ್ತು ದುಡಿಯುವವರಿಗೆ ಸಂಕಷ್ಟ ದಲ್ಲಿ ರುವ ಕಾರಣ ಕಿರು  ಸಂಸ್ಥೆ ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲು ಸಮಾವೇಶ ದಲ್ಲಿ ರಾಜ್ಯದ ಮುಖ್ಯ ಮಂತ್ರಿಗೆ ಜಿಲ್ಲಾಧಿಕಾರಿ ಯ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನಾ ಸಭೆಯಲ್ಲಿ ಇಸ್ಮಾಯಿಲ್ ಕಡಬ, ಎಲ್. ಮಂಜುನಾಥ್,ನವೀನ್ ಪುತ್ರನ್,ಕೇಶವ ಪುತ್ತೂರು, ನಾಗರಾಜ ಬಂಟ್ವಾಳ ,ಭರತ್ ಮಂಗಳೂರು,ಸವಿತಾ,ಸೇಸಪ್ಪ ಬೆದ್ರಕಾಡು ಮೊದಲಾದ ವರು ಉಪಸ್ಥಿತರಿದ್ದರು.

ಸಭೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷೆ ನೆಬಿಸಾ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲೆಯ ವಿವಿಧ ಕಡೆಗಳಲ್ಲಿ ಕಿರು ಹಣಕಾಸು ಸಂಸ್ಥೆ ಗಳಿಂದ ಸಾಲ ಸಹಾಯ ಪಡೆದವರ ಸಹಿಸಂಗ್ರಹ ಅಭಿಯಾನ ಆರಂಭಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News