ನ.29ರಿಂದ ಎಸಿಬಿಯಿಂದ ಅಹವಾಲು ಸ್ವೀಕಾರ
Update: 2019-11-28 16:24 GMT
ಉಡುಪಿ, ನ.28: ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿಗಳು ನ.29ರಂದು ಬೆಳಿಗ್ಗೆ 11 ರಿಂದ ಅಪರಾಹ್ನ 1 ರವರೆಗೆ ಬೈಂದೂರು ಪ್ರವಾಸಿ ಮಂದಿರದಲ್ಲಿ, 2:30ರಿಂದ ಸಂಜೆ 4:30ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಮತ್ತು ನ.30ರಂದು ಬೆಳಗ್ಗೆ 11 ರಿಂದ 1 ರವರೆಗೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಹಾಗೂ 2:30ರಿಂದ ಸಂಜೆ 4:30ರವರೆಗೆ ಹೆಬ್ರಿ ಪ್ರವಾಸಿ ಮಂದಿರದಲ್ಲಿ ಮೊಕ್ಕಾಂ ಇದ್ದು, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಸಾರ್ವಜನಿಕ ನೌಕರ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ಅನಗತ್ಯ ವಿಳಂಬ ಮಾಡಿದ್ದಲ್ಲಿ, ನಿರ್ಲಕ್ಷ ತೋರಿದ್ದಲ್ಲಿ ಮತ್ತು ಲಂಚ ಕೇಳಿದಲ್ಲಿ ದೂರು ಸ್ವೀಕರಿಸಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.