ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಸಂವಾದ ಕಾರ್ಯಕ್ರಮ

Update: 2019-11-28 16:47 GMT

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಹಯೋಗದೊಂದಿಗೆ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಐಐಟಿ ಇನ್‍ಸ್ಟಿಟೂಟ್ ಳಿಗೆ ಪ್ರವೇಶಾತಿ ಪಡೆಯುವ ಕುರಿತಾದ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಜಪಾನಿನ ಕುಮಮೋಟೋ ವಿಶ್ವವಿದ್ಯಾನಿಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಡಾ. ಸಿಚಿ ತೋರಿ, ಫ್ರಾನ್ಸ್‍ನ ಲ್ಯಾಬೋರೇಟರಿ ಆಫ್ ಕ್ರಿಸ್ಟೋಲೋಗ್ರಫಿಯ ನಿರ್ದೇಶಕರಾದ ಡಾ. ವಿಲ್ಫ್ರಿಡ್ ಪ್ರಿಲ್ಲರ್, ಐಐಟಿ ಮದ್ರಾಸಿನ ಭೌತಶಾಸ್ತ್ರ ಉಪನ್ಯಾಸಕ  ಡಾ. ಸೇತುಪತಿ, ಐಐಟಿ ಮದ್ರಾಸಿನ ಡಾ. ಎಮ್ ಎಸ್ ರಾಮಚಂದ್ರ ರಾವ್,  ಐಐಟಿ ಹೈದರಾಬಾದಿನ ಡಾ. ರಂಜಿತ್ ರಾಮಧುರೈ, ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಇಲೆಕ್ಟ್ರಾನಿಕ್ಸ್ ವಿಭಾಗದ ಡಾ. ರಿಚರ್ಡ್ ಪಿಂಟೋ ಭಾಗವಹಿಸಿದರು. ವಿದ್ಯಾರ್ಥಿಗಳಿಗೆ  ವಿವಿಧ ಐಐಟಿ ಕ್ಯಾಂಪಸ್‍ಗಳ ಪರಿಚಯ ಮತ್ತು ಪ್ರವೇಶ ಪರೀಕ್ಷೆಯ ಕುರಿತು ಮಾಹಿತಿ ನೀಡಲಾಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಆಕಾಂಕ್ಷೆಗಳನ್ನು ಇರಿಸಿಕೊಂಡು ಮುಂದುವರಿಯಬೇಕು.   ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸುವುದ ರೊಂದಿಗೆ  ಉತ್ತಮ ಮಾದರಿಯನ್ನು ಬೆಳೆಸಬೇಕೆಂದರು.

ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರ ವಿಭಾಗದ ಡೀನ್ ಜಾನ್ಸಿ, ಐಐಟಿ ಸಂಯೋಜಕ ಗಣನಾಥ್ ಶೆಟ್ಟಿ, ಆಡಳಿತಾಧಿಕಾರಿ ಅಭಿನಂದನ್ ಶೆಟ್ಟಿ ವಿವಿಧ ವಿಭಾಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News