ನ. 30ರಂದು ಶ್ವಾಸಕೋಶ ಸಂಬಂಧಿ ಖಾಯಿಲೆ (ಸಿಒಪಿಡಿ) ಸಮಗ್ರ ಚಿಕಿತ್ಸೆ ಸಂವಾದ

Update: 2019-11-28 18:16 GMT

ಮಂಗಳೂರು : ಎಲ್ಲ ಒಟ್ಟಿಗೆ ಸೇರಿ ಸಿಒಪಿಡಿ ಯನ್ನು ಕೊನೆಗೊಳಿಸಿ ಎಂಬ ಧ್ಯೇಯದಿಂದ ಸಿಒಪಿಡಿ ಖಾಯಿಲೆಗೆ ಜಾಗೃತಿ ಪ್ರಯುಕ್ತ ಸಮಗ್ರ ಚಿಕಿತ್ಸಾ ಸಂವಾದ ಕಾರ್ಯಕ್ರಮವನ್ನು ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶ್ವಾಸಕೋಶ ವಿಭಾಗದಿಂದ ನ. 30ರ ಮಧ್ಯಾಹ್ನ 12ಕ್ಕೆ ಆಸ್ಪತ್ರೆಯ 8ನೇ ಮಹಡಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಸಂವಾದದಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ನಂದಕಿಶೋರ್ ವಿಶೇಷ ಆಹ್ವಾನಿತರಾಗಿ, ಯೆನೆಪೊಯ ಆಸ್ಪತ್ರೆಯ ಸಾಮಾನ್ಯ ವೈದ್ಯಕೀಯ ವಿಭಾಗ ಡಾ. ಪ್ರಭಾ ಅಧಿಕಾರಿ, ಶ್ವಾಸಕೋಶ ಚಿಕಿತ್ಸಾ ವೈದ್ಯರಾದ ಡಾ. ಇರ್ಪಾನ್ ಹಾಗೂ ಡಾ. ಪ್ರೀತಿರಾಜ್ ಬಳ್ಳಾಲ್, ಮನೋರೋಗ ತಜ್ಞರಾದ ಡಾ. ಅನಿಲ್ ಕಾಕ್ಕುಂಜೆ, ಫಿಸಿಯೋಥೆರಪಿಸ್ಟ್ ಎಂ.ಆರ್. ಶಿವಕುಮಾರ, ವೈದ್ಯಕೀಯ ಸಮಾಜ ಸೇವೆಯ ಡಾ. ಮಹಮ್ಮದ್ ಗುತ್ತಿಗಾರು, ಆಹಾರ ತಜ್ಞೆ  ಹರ್ಷಿತಾ, ಯೋಗ ಚಿಕಿತ್ಸಕ, ಸಂಶೋಧಕ ಕುಶಾಲಪ್ಪ ಗೌಡ, ಶ್ವಾಸಕೋಶ ಥೇರಪಿಸ್ಟ್  ಅಂಜಲಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ಸಿಒಪಿಡಿ ಖಾಯಿಲೆಗೆ ಉಪಯುಕ್ತ ಚಿಕಿತ್ಸಾ ಪದ್ಧತಿಯ ಬಗ್ಗೆ ವಿಮರ್ಶೆ ಮಾಡಲಿರುವರು.

ಶ್ವಾಸಕೋಶ ಸಂಬಂಧಿ ಖಾಯಿಲೆ ಇರುವವರು, ಅವರ ಕುಟುಂಬಸ್ಥರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 98455588740 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News