‘ಪೆನ್ಸಿಲ್ ಬಾಕ್ಸ್’ ಚಲನ ಚಿತ್ರ ಬಿಡುಗಡೆ

Update: 2019-11-29 14:47 GMT

ಮಂಗಳೂರು, ನ.29: ದೃಶ್ಯ ಮೂವೀಸ್ ಬ್ಯಾನರಿನಲ್ಲಿ ದಯಾನಂದ ಎಸ್. ರೈ ಬೆಟ್ಟಂಪಾಡಿ ನಿರ್ಮಾಣದಲ್ಲಿ ರಝಾಕ್ ಪುತ್ತೂರು ನಿರ್ದೇಶನದಲ್ಲಿ ತಯಾರಾದ ‘ಪೆನ್ಸಿಲ್ ಬಾಕ್ಸ್’ ಕನ್ನಡ ಚಲನ ಚಿತ್ರದ ಬಿಡುಗಡೆಯು ನಗರದ ಭಾರತ್ ಮಾಲ್‌ನ ಬಿಗ್ ಸಿನಿಮಾಸ್‌ನಲ್ಲಿ ಶುಕ್ರವಾರ ನಡೆಯಿತು.

ಸಿನಿಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಿನಿಮಾ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತನಾಡಿ ಸರಕಾರಿ ಮತ್ತು ಖಾಸಗಿ ಶಾಲೆಯ ವಸ್ತು ಸ್ಥಿತಿಯನ್ನೊಳಗೊಂಡ ಪೆನ್ಸಿಲ್ ಬಾಕ್ಸ್ ಕೌಟುಂಬಿಕ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆಲ್ಲಲಿ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಭೋಜರಾಜ ವಾಮಂಜೂರು, ನವೀನ್ ಮಾರ್ಲ, ರಾಜೇಶ್ ಕಣ್ಣೂರು, ರಾಜೇಶ್ ರೈ ಕುಕ್ಕುವಳ್ಳಿ, ಸಂದೀಪ್ ಮಲಾನಿ, ಭಾಗೀರಥಿ ಶೆಟ್ಟಿ, ಫಿನ್ಸ್ ಮೌನೇಶ್ , ಶಶಿಕಲಾ ದಯಾನಂದ ರೈ, ನಿರ್ದೇಶಕ ರಝಾಕ್ ಪುತ್ತೂರು, ಸಮೃದ್ಧ್ ಉಪಸ್ಥಿತರಿದ್ದರು.

‘ಪೆನ್ಸಿಲ್ ಬಾಕ್ಸ್’ ಸಿನಿಮಾವು ಮಂಗಳೂರಿನಲ್ಲಿ ರಾಮಕಾಂತಿ, ಭಾರತ್ ಸಿನಿಮಾಸ್, ಸಿನಿಪೊಲೀಸ್ ಉಡುಪಿಯಲ್ಲಿ ಆಶೀರ್ವಾದ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಕಾರ್ಕಳದಲ್ಲಿ ರಾಧಿಕಾ, ಸುರತ್ಕಲ್‌ನಲ್ಲಿ ನಟರಾಜ್, ಮೂಡುಬಿದಿರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ಪ್ಲಾನೆಟ್, ಕಾಸರಗೋಡಿನಲ್ಲಿ ಶ್ರೀ ಕೃಷ್ಣ ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ. ಖ್ಯಾತ ನಟರಾದ ಅರವಿಂದ ಬೋಳಾರ್, ಭೋಜರಾಜ, ವಾಮಂಜೂರು, ರಮೇಶ್ ರೈ ಕುಕ್ಕುವಳ್ಳಿ, ನಿರೀಕ್ಷಾ ಶೆಟ್ಟಿ, ಆರ್ಯನ್, ದಯಾನಂದ ರೈ ಬೆಟ್ಟಂಪಾಡಿ ಮೊದಲಾದವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News