ಭಾರತೀಯ ಸಂಸ್ಕೃತಿ ಅರಿಯಲು ಕಲಾರೂಪ ಅಗತ್ಯ: ಪ್ರೊ.ವೆಂಕಟ್ ರಾವ್

Update: 2019-11-29 17:22 GMT

ಮಂಗಳೂರು, ನ.29: ಕಲೆ ಹಾಗೂ ಸಂಸ್ಕೃತಿಯನ್ನು ತಿಳಿಸಿಕೊಡಲು ಬಳಸುವ ಪಾಶ್ಚಾತ್ಯ ಭಾಷೆಯ ಪ್ರಯೋಗ ಸರಿಯಲ್ಲ. ಭಾರತೀಯ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಇಲ್ಲಿನ ಕಲಾರೂಪಗಳು ಅಗತ್ಯ ಎಂದು ಪ್ರೊ.ಡಿ.ವೆಂಕಟ್ ರಾವ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಟಿಎಂಎ ಪೈ ಹಾಲ್‌ನಲ್ಲಿ ಶುಕ್ರವಾರ ಆರಂಭಗೊಂಡ ‘ಮಂಗಳೂರು ಲಿಟ್ ಫೆಸ್ಟ್’ನ ‘ವೈವಿಧ್ಯತೆ ಹಾಗೂ ಪ್ರದರ್ಶನ ಕಲೆ’ ಕುರಿತಾದ ವಿಷಯದಲ್ಲಿ ಅಶ್ವಿನಿ ದೇಸಾಯಿ ಅವರೊಂದಿಗೆ ಸಂವಾದ ನಡೆಸಿ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಪ್ರದರ್ಶನ ಕಲೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದರಿಂದ ಕಲೆಗೆ ಅಪಾಯವಿದೆ. ಯೂರೋಪಿನ ಸಮಾಜವು ಬರವಣಿಗೆಯ ಮೂಲಕ ಸಂವಾದ ನಡೆಸಿದರೆ, ಭಾರತೀಯ ಪರಂಪರೆಯಲ್ಲಿ ಪ್ರದರ್ಶನ, ಭಾಷೆಯ ಮೂಲಕ ಕಲೆಯನ್ನು ಅಭಿವ್ಯಕ್ತಪಡಿಸಲಾಗುತ್ತದೆ. ಭಾಷೆಯ ಬಳಸುವಿಕೆಯಿಂದ ಸಮಾಜದಲ್ಲಿನ ಸಂಸ್ಕೃತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News