ಸರಕಾರಿ ಶಿಕ್ಷಕರ ವೇತನ ಶೀಘ್ರ ಬಿಡುಗಡೆಗೆ ಸಿಎಫ್‌ಐ ಆಗ್ರಹ

Update: 2019-12-01 14:42 GMT

ಮಂಗಳೂರು, ಡಿ.1: ಶಾಲೆಗಳಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳನ್ನು ಸುಶಿಕ್ಷಿತರನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಆದರೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲಾ ಶಿಕ್ಷಕರಿಗೆ ಸರಕಾರ ಹಲವು ತಿಂಗಳ ವೇತನ ಬಾಕಿಯಿರಿಸಿದೆ. ಇದರಿಂದ ಶಿಕ್ಷಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ತಕ್ಷಣ ಶಿಕ್ಷಕರ ವೇತನ ಬಿಡುಗಡೆ ಮಾಡಬೇಕು ಎಂದು ಕ್ಯಾಂಪಸ್‌ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಸದಸ್ಯ ಹಾಗೂ ಶಿಕ್ಷಣ ವಿಭಾಗದ ಉಸ್ತುವಾರಿ ಅಲ್ತಾಫ್ ಹೊಸಪೇಟೆ ಒತ್ತಾಯಿಸಿದ್ದಾರೆ.

ಇಲಾಖೆಯಿಂದ ನೇರ ನೇಮಕಾತಿಗೊಂಡ ಶಿಕ್ಷಕರನ್ನು ಈ ರೀತಿ ನಿರ್ಲಕ್ಷಿಸುವ ಕ್ರಮ ಖಂಡನೀಯ. ಪ್ರತೀ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರು ಒಂದಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News