ಮಂಗಳೂರು : ನೆಹರು ಮೈದಾನದಲ್ಲಿ ಶ್ವಾನ ಪ್ರದರ್ಶನ
ಮಂಗಳೂರು, ಡಿ.1:ಮಂಗಳೂರು ಕೆನೈನ್ ಕ್ಲಬ್ ವತಿಯಿಂದ ನಗರದ ನೆಹರು ಮೈದಾನದಲ್ಲಿ ರವಿವಾರ ನಡೆದ ಶ್ವಾನ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಸುಮಾರು 300 ಶ್ವಾನಗಳ ಪ್ರದರ್ಶನ ನಡೆಯಿತು.
ಕೇರಳ, ತಮಿಳು ನಾಡು, ಆಂಧ್ರ ಪ್ರದೇಶ,ಗೋವಾ ಮಹಾರಾಷ್ಟ್ರ ಹಾಗೂ ಕರ್ನಾಟಕದ ಸುಮಾರು 300ಶ್ವಾನಗಳ ಪ್ರದರ್ಶನ ನಡೆಯಿತು. ದೇಶ ವಿದೇಶದ ಸುಮಾರು 30ತಳಿಯ ಶ್ವಾನಗಳ ಪ್ರದರ್ಶನ ನಡೆಯಿತು. ಇದು ಮಂಗಳೂರಿನಲ್ಲಿ ನಡೆಯುತ್ತಿರುವ ಎಂಟನೆ ಪ್ರದರ್ಶನವಾಗಿದೆ. ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಘಟಕ ಶಶಾಂಕ್ ತಿಳಿಸಿದ್ದಾರೆ.
"ವಿವಿಧ ಜಾತಿಯ ಶ್ವಾನ ಗಳ ತಳಿಯ ಅಭಿವೃದ್ಧಿ ದ್ರಷ್ಟಿಯಿಂದ ಮತ್ತು ಶ್ವಾನ ಪ್ರೀಯರ ನಡುವೆ ಮಾಹಿತಿ ನೀಡುವ ದ್ರಷ್ಟಿಯಿಂದ ಮತ್ತು ವೈಜ್ಞಾನಿಕ ವಾಗಿ ಶ್ವಾನ ಗಳ ಬೆಳವಣಿಗೆ ಯ ದ್ರಷ್ಟಿಯಿಂದ ಈ ರೀತಿಯ ಪ್ರದರ್ಶನ ಮುಖ್ಯ ವಾಗುತ್ತದೆ " ಎಂದು ಪ್ರದರ್ಶನದ ಸಂಘಟಕರಾದ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಮೋಡ ಕವಿದ ವಾತಾವರಣ ಮತ್ತು ಸಂಜೆಯ ವೇಳೆಗೆ ಸುರಿದ ತುಂತುರು ಮಳೆಯ ನಡುವೆ ತಮಗೆ ತರಬೇತಿ ನೀಡಿದ ತರಬೇತುದಾರರ ಸೂಚನೆಗಳನ್ನು ತಪ್ಪದೆ ಪಾಲಿಸಿದ ಜರ್ಮನ್ ಶೆಪರ್ಡ್, ಲ್ಯಾಂಬ್ರಿ ಡಾರ್, ಪಾಮೊರಿನ್ ಮೊದಲಾದ ವಿದೇಶಿ ತಳಿಗಳ ಜೊತೆ ರಾಜ್ಯದ ಮುದೋಳ್ ತಳಿಯಬೇಟೆ ನಾಯಿಗಳು ಗಮನ ಸೆಳೆದವು.