ಯುಎಇ : ಕೆಎಸ್ ಸಿಸಿ ಫಿಟ್ನೆಸ್ ಚಾಲೆಂಜ್ ಅಭಿಯಾನ
Update: 2019-12-01 18:55 GMT
ಯುಎಇ : ದುಬೈ ಫಿಟ್ನೆಸ್ ಚಾಲೆಂಜ್ 30 ದಿನಗಳ ಅಭಿಯಾನದ ಸಮಾರೋಪ ಕಾರ್ಯಕ್ರಮದ ಅಂಗವಾಗಿ ನ.29ರಂದು ಕರ್ನಾಟಕ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್ ಕ್ಲಬ್ ಅಲ್ ಮಂಮ್ಝಾರ್ ಪಾರ್ಕಿನಲ್ಲಿ ಫಿಟ್ನೆಸ್ ಆ್ಯಕ್ಟಿವಿಟೀಸ್ ಪ್ರೋಗ್ರಾಂ ಆಯೋಜಿಸಿತ್ತು.
ಕಾರ್ಯಕ್ರಮಕ್ಕೆ ಎಂಸ್ಕ್ವೇರ್ ಸಂಸ್ಥೆಯ ಮಾಲಕ ಮುಹಮ್ಮದ್ ಮುಸ್ತಫಾ ಚಾಲನೆ ನೀಡಿದರು. ಕರಾಟೆ ಪಟುಗಳಾದ ಅಯಾನ್, ಅದಾನ್, ಅಫಾನ್ ಅವರಿಂದ ಮಾರ್ಷಲ್ ಆರ್ಟ್ಸ್ ಪ್ರದರ್ಶನ ನಡೆಯಿತು.
ಈ ಸಂದರ್ಭ ಹಫೀಝ್, ಝಿಯಾವುದ್ದೀನ್, ಶಫಿ, ನಾಸಿರ್ ಹಾಗು ಇತರರು ಉಪಸ್ಥಿತರಿದ್ದರು. ತನ್ವೀರ್ ಕಾರ್ಯಕ್ರಮ ನಿರೂಪಿಸಿದರು.