ಮಂಗಳೂರು : ನೇಣುಬಿಗಿದು ​ಯುವತಿ ಆತ್ಮಹತ್ಯೆ

Update: 2019-12-02 16:51 GMT

ಮಂಗಳೂರು, ಡಿ. 2: ಬೆಂಗರೆ ನಿವಾಸಿ ಯುವತಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಸಬ ಬೆಂಗರೆ ನಿವಾಸಿ ಅನಿಷಾ (24) ಮೃತಪಟ್ಟವರು.

ಸೋಮವಾರ ಮನೆಯಲ್ಲಿ ಅಮ್ಮ, ತಮ್ಮ, ತಂಗಿಯಂದಿರುವ ಇರುವ ವೇಳೆಯೇ ಅನಿಷಾ ಮನೆಯ ರೂಮುವೊಂದಕ್ಕೆ ಹೋಗಿ ಚಿಲಕ ಹಾಕಿದ್ದಾರೆ. ಅರ್ಧ ಗಂಟೆಯಾದರೂ ಹೊರಗೆ ಬಾರದಿದ್ದಾಗ ಮನೆಯಲ್ಲಿದ್ದವರು ಅನಿಷಾರನ್ನು ಕರೆದಿದ್ದು ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ಮತ್ತೊಂದು ಕೋಣೆಯಿಂದ ಹತ್ತಿ ನೋಡಿದಾಗ ಅನಿಷಾ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿರುವು ಕಂಡು ಬಂದಿದೆ ಎಂದು ದೂರಲಾಗಿದೆ.

ಕೂಡಲೇ ಮನೆಯವರು ಬೊಬ್ಬೆ ಹಾಕಿದ್ದು, ಸ್ಥಳೀಯರು ಓಡಿ ಬಂದು ಬಾಗಿಲನ್ನು ಹೊಡೆದು ಒಳಗೆ ಹೋಗಿ ಕುತ್ತಿಗೆಯಿಂದ ಶಾಲು ಬಿಡಿಸಿ ನಗರದ ಖಾಸಗಿ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಅನಿಷಾರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News