ಶ್ರೀನಿವಾಸ ಕಾಲೇಜಿನಲ್ಲಿ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮ

Update: 2019-12-03 16:12 GMT

ಮಂಗಳೂರು : ವ್ಯಸನಿಗಳು ತಂಬಾಕು ಬಳಕೆ ನಿಲ್ಲಿಸುವುದು ಮತ್ತು ನಿಕೋಟಿನ್ ಹಿಂತೆಗೆದುಕೊಳ್ಳುವಿಕೆಯ ನಿರ್ವಹಣೆಗೆ ವರ್ತನೆಯ ಮಾರ್ಪಾಡು ತಂತ್ರಗಳ ಬಗ್ಗೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ವತಿಯಿಂದ ಇತ್ತೀಚೆಗೆ ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನವೆಂಬರ್ ತಿಂಗಳನ್ನು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಅಸ್ವಸ್ಥತೆಯ ಜನಜಾಗೃತಿಗಾಗಿ ಮೀಸಲಾಗಿರುತ್ತದೆ. ಸಿಒಪಿಡಿಗೆ ಧೂಮಪಾನ ಮತ್ತು ತಂಬಾಕು ಒಂದು ಮುಖ್ಯ ಕಾರಣವಾಗಿದೆ ಮತ್ತು ಬಾಯಿಯ ಕ್ಯಾನ್ಸರ್ ತಗುಲಲು ಕೂಡ ತಂಬಾಕು ಮುಖ್ಯ ಕಾರಣವಾಗಿದೆ.  ತಂಬಾಕು ಅಭ್ಯಾಸವನ್ನು ನಿಲ್ಲಿಸುವಲ್ಲಿ ಜನರಿಗೆ ಸಹಾಯ ಮಾಡಲು ಹಲವಾರು ಪ್ರಯತ್ನ ಗಳು ನಡೆದಿವೆ. ತಂಬಾಕು ದುರಾಭ್ಯಾಸವನ್ನು ನಿಯಂತ್ರಿಸಲು ದಂತ ವೈದ್ಯಕೀಯ ಸಂಸ್ಥೆಗಳು ತಂಬಾಕು ವರ್ಜನ ಕೇಂದ್ರಗಳನ್ನು (ಟಿಸಿಸಿ) ಸ್ಥಾಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ವೈದ್ಯರ ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಪ್ರೊಚಾನ್ಸೆಲರ್ ಮತ್ತು ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಎ.ಶ್ರೀನಿವಾಸ್ ರಾವ್ ಉದ್ಘಾಟಿಸಿದರು. ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ನ ಡೀನ್ ಪ್ರೊ. ಮನೋಜ್ ವರ್ಮಾ ಮತ್ತು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್ ಡೀನ್ ಡಾ.ಉದಯ್ ಕುಮಾರ್ ರಾವ್ ಅವರು ಭಾಷಣ ಮಾಡಿದರು.

ರಾಜಸ್ಥಾನದ ದಾಸ್ವಾನಿ ಡೆಂಟಲ್ ಕಾಲೇಜಿನ ಓರಲ್ ಪ್ಯಾಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ  ಡಾ. ಸಚಿನ್ ಸಿನ್ಹಾ ಅವರು ತಂಬಾಕು ನಿಲುಗಡೆ ಸಮಾಲೋಚನೆ ಮತ್ತು ನಿಕೋಟಿನ್ ಹಿಂತೆಗೆದುಕೊಳ್ಳುವಿಕೆಯ ನಿರ್ವಹಣೆ - ದಂತವೈದ್ಯರ ಪಾತ್ರ ಎಂಬ ವಿಚಾರದ ಬಗ್ಗೆ ಮಾತನಾಡಿದರು.

ತಂಬಾಕು ಬಳಕೆಯ ಅಂಶಗಳು ಮತ್ತು ಅದರ ಆರೋಗ್ಯ, ಕಾನೂನು ಮತ್ತು ಸಾಮಾಜಿಕ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ಪ್ರೋತ್ಸಾಹಿಸುವ ಚಟುವಟಿಕೆಯನ್ನು ಅವರು ಸಂಯೋಜಿಸಿದರು. ತಂಬಾಕು ಬಗ್ಗೆ ರಸಪ್ರಶ್ನೆ ನಡೆಸಿ ವಿಜೇತರಿಗೆ ಪ್ರಮಾಣಪತ್ರ ನೀಡಲಾಯಿತು. ಶ್ರೀನಿವಾಸ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ ಮನೋವೈದ್ಯಶಾಸ್ತ್ರ ವಿಭಾಗದ ಹಿರಿಯ ವೈದ್ಯೆ ಡಾ. ಮನು ಆನಂದ್ ಅವರು ತಂಬಾಕು ನಿಲುಗಡೆಗೆ ಪ್ರೇರಕ ವರ್ಧನೆ ಚಿಕಿತ್ಸೆ ಮಾತನಾಡಿದರು.

ಸಾರ್ವಜನಿಕ ಆರೋಗ್ಯ ದಂತವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ.ಶ್ರೀವಿದ್ಯಾ ಭಟ್ ಸ್ವಾಗತಿಸಿದರು ಮತ್ತು ಸಾರ್ವಜನಿಕ ಆರೋಗ್ಯ ದಂತವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೃಪಾಲ್ ರೈ ಅವರು ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News