ಹಾಸ್ಟೆಲ್‌ನಿಂದ ವಿದ್ಯಾರ್ಥಿ ನಾಪತ್ತೆ

Update: 2019-12-04 15:56 GMT

ಕಾರ್ಕಳ, ಡಿ.4: ಕಾಂತಾವರ ಗ್ರಾಮದ ಪ್ರಕೃತಿ ವಿದ್ಯಾಸಂಸ್ಥೆಯ ಹಾಸ್ಟೆಲ್ ನಲ್ಲಿ ವಾಸವಾಗಿರುವ ವಿದ್ಯಾರ್ಥಿಯೊಬ್ಬ ಡಿ.2ರಂದು ರಾತ್ರಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

 ಸಂಸ್ಥೆಯ ಮೊದಲನೆ ವರ್ಷದ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಬೆಂಗಳೂರು ಬೊಮ್ಮನಹಳ್ಳಿ ನಿವಾಸಿ ದರ್ಶನ್ ಎನ್.ಎಂ.(17) ಎಂಬಾತ ಎರಡು ಬ್ಯಾಗ್ಗಳ ಸಹಿತ ಹಾಸ್ಟೆಲ್‌ನಿಂದ ನಾಪತ್ತೆಯಾಗಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News