ಗಂಗೊಳ್ಳಿ: ತೌಹೀದ್ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

Update: 2019-12-05 13:56 GMT

ಗಂಗೊಳ್ಳಿ, ಡಿ. 5: ಗಂಗೊಳ್ಳಿಯ ತೌಹೀದ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಮಂಗಳವಾರ ನಡೆಯಿತು. ಗೋವಾದ ಉದ್ಯಮಿ ಮುಹಮ್ಮದ್ ಇಬ್ರಾಹಿಂ ಮೌಲಾನ ಉದ್ಘಾಟಿಸಿದರು.

ಉದ್ಯಮಿ ಅಬ್ದುಲ್ ರಹ್ಮಾನ್, ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ, ಗಂಗೊಳ್ಳಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ವಾಸಪ್ಪ ನಾಯಕ್, ಜಿಮ್ ತರಬೇತುದಾರ ಗುರು ದೀಪಕ್ ಕಾಮತ್ ಮುಖ್ಯ ಅತಿಥಿಗಳಾಗಿದ್ದರು.

ವಿದ್ಯಾರ್ಥಿಗಳಿಂದ ಪಥಸಂಚಲನ ಹಾಗೂ ವಿದ್ಯಾರ್ಥಿನಿಯರಿಂದ ಕವಾಯತು ನಡೆಯಿತು. ಬಳಿಕ ಮೌಲಾನಾ ಅಬುಲ್‌ ಕಲಾಂ ಆಝಾದ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಇಮ್ತಿಯಾಝ್ ಅಹ್ಮದ್ ಕಾಝಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಎನ್‌ಆರ್‌ಐ(ಅನಿವಾಸಿ ಭಾರತೀಯ) ಪೋಷಕ ಹಾಗೂ ಹಿತಚಿಂತಕರಾದ ಮುಹಮ್ಮದ್ ಅನ್ಸಾರ್ ಬಸ್ರೂರು, ಇಫ್ತಿಖಾರ್ ಎಂಎಚ್, ನಿಸಾರ್ ಅಹ್ಮದ್ ಎಂಎಚ್, ಮುದಾಸಿರ್ ಎಂಎಚ್, ಮುಹಮ್ಮದ್ ಇಬ್ರಾಹಿಂ ಚೌಗ್ಲೆ, ಅಝ್ಮುದ್ದೀನ್ ಖಾಜ, ಪಣಜಿಯ ನಿತಿನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅಖ್ಸಾ ಕೆ ಖಿರಾಅತ್ ಪಠಿಸಿದರು. ವಿದ್ಯಾರ್ಥಿನಿಯರಾದ ಮರ್ಯಮ್, ಐಶಾ ಶಹೀಬಾ ಅದನ್ನು ಅನುವಾದಿಸಿದರು. ಫಾತಿಮಾ ಹಾಗೂ ಹನಿಯಾ ಹಮದ್ ಹಾಗೂ ನಾಥ್ ಸಲ್ಲಿಸಿದರು.

ರುಮೈಝಾ ಸ್ವಾಗತಿಸಿದರು. ಮುಮ್ತಾಝ್, ಸಮ್ರೀನ್, ಸಫ ಮರ್ವ, ದೀಕ್ಷಿತಾ, ಐಶಾ ಮಿಸ್ಬ ಅತಿಥಿಗಳನ್ನು ಪರಿಚಯಿಸಿದರು. ಅಸ್ಫಾ ಬಗಲಿ ವಂದಿಸಿ, ಖಾವ್ಲ ಕಾಸಿ ಮತ್ತು ಸಫಾ ಸಯೀದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News