ಬಂಟರ ಸಭಾಭವನ ಯೋಜನೆ ಕೈ ಬಿಟ್ಟಿಲ್ಲ ಪ್ರಗತಿಯಲ್ಲಿದೆ -ಮಾಲಾಡಿ ಅಜಿತ್ ಕುಮಾರ್ ರೈ

Update: 2019-12-06 14:30 GMT

ಮಂಗಳೂರು, ಡಿ. 6: ಬಂಟರ ಯಾನೆ ನಾಡವರ ಮಾತೃ ಸಂಘದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು  2019ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತಿದ್ದೇನೆ ಎಂದು ಸಂಘದ ಹಾಲಿ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.

ಡಿ.8 ರಂದು ನಡೆಯಲಿರುವ ಸಂಘದ ಅಧ್ಯಕ್ಷರ ಚುನಾವಣೆ ಯಲ್ಲಿ ನಾನು ಮರು ಆಯ್ಕೆಗಾಗಿ ನಾಮಪತ್ರ ಸಲ್ಲಿಸಿದ್ದೇನೆ. ಬಂಟರ ಸಂಘದ ಅಧ್ಯಕ್ಷ ನಾಗಿ ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಆಗಿದೆ. ಮರವೂರಿನಲ್ಲಿ ಬಂಟರ ಸಂಘದ ವಿದ್ಯಾ ಸಂಸ್ಥೆ ಗಳನ್ನು ಸ್ಥಾಪಿಸಲು ಒಂದು ಎಕರೆ ಎಂಟು ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದೇನೆ. ಈ ಬಾರಿ ನಾನು ಚುನಾವಣೆ ಯಲ್ಲಿ ಸ್ಪರ್ಧಿಸುವ ಉದ್ದೇಶ ಹೊಂದಿರಲಿಲ್ಲ. ಆದರೆ ಸಂಘದ ಎಲ್ಲಾ ಸದಸ್ಯರ ಒಕ್ಕೊರಲ ಅಭಿಪ್ರಾಯ ದಂತೆ ನಾನು ಚುನಾವಣಾ ಕಣಕ್ಕಿಳಿಯ ಬೇಕಾಯಿತು. ಅಂತಿಮವಾಗಿ ನನ್ನೊಂದಿಗೆ ಇದ್ದವರು ಮನ್ಸೂಚನೆ ಇಲ್ಲದೆ ಪ್ರತಿಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸಿರುವ ಕಾರಣ ಅನಿವಾರ್ಯ ವಾಗಿ ಚುನಾವಣೆ ನಡೆಯುತ್ತಿದೆ ಎಂದು ಅಜಿತ್ ಕುಮಾರ್ ರೈ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಇತರ ಸ್ಪರ್ಧಿಗಳಾದ ಜಯರಾಮ ಸಾಂತ,ವಸಂತ ಶೆಟ್ಟಿ, ರವೀಂದ್ರನಾಥ ಎಸ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News