ದುಬೈ: ದಾರುನ್ನೂರ್ ವತಿಯಿಂದ 'ಮೆಹಫೀಲ್ ಏ ಮೀಲಾದುನ್ನಬಿ'

Update: 2019-12-07 07:53 GMT

ದುಬೈ : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದಿರೆ ಇದರ ಯು ಎ ಇ ಕಲ್ಚರಲ್ ಸೆಂಟರ್ ವತಿಯಿಂದ  ದುಬೈಯಲ್ಲಿರುವ ಏಪಲ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಮೆಹಫಿಲ್ ಏ ಮೀಲಾದುನ್ನಬಿ  ಮತ್ತು 5ನೇ ವಾರ್ಷಿಕ ಮಹಾ ಸಮ್ಮೇಳನ ಕಾರ್ಯಕ್ರಮವು ಸಂಶುದ್ದೀನ್ ಸೂರಲ್ಪಾಡಿ ಅಧ್ಯಕ್ಷತೆಯಲ್ಲಿ ತ್ವಾಕಾ ಉಸ್ತಾದ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ  ಜಿಲ್ಲಾ ಖಾಝಿ, ದಾರುನ್ನೂರ್ ಕೇಂದ್ರ ಸಮಿತಿ ಅಧ್ಯಕ್ಷ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್, ದಾರುನ್ನೂರ್ ಕೇಂದ್ರ ಸಮಿತಿ  ಡೈರೆಕ್ಟರ್, ಮಾಜಿ ಎಂ ಎಲ್ ಸಿ, ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ ಎಸ್ ಮಹಮ್ಮದ್ ಮಸೂದ್, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ ಬಿ.ಸಿ ರೋಡ್, ಕೇಂದ್ರ ಸಮಿತಿ ಉಪಾಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಮಂಗಳೂರು, ಉಪಾಧ್ಯಕ್ಷ ಸಮದ್ ಹಾಜಿ ಮಂಗಳೂರು, ಸಂಘಟನೆ ಕಾರ್ಯದರ್ಶಿ ಫಕೀರಬ್ಬ ಮಾಸ್ಟರ್ ಪ್ಲವರ್, ಕೇಂದ್ರ ಸಮಿತಿ ಸದಸ್ಯ ನೌಶಾದ್ ಹಾಜಿ ಸೂರಲ್ಪಾಡಿ, ಆಸಿಫ್ ತೋಡಾರ್ ಮೊದಲಾದ ಪ್ರಮುಖರು ಆಗಮಿಸಿದ್ದರು.

ಸಯ್ಯದ್ ಅಸ್ಕರ್ ಅಲಿ ತಂಙಳ್ , ಸುಲೈಮಾನ್ ಮೌಲವಿ ಕಲ್ಲೆಗ ಮತ್ತು  ಶರೀಫ್ ಅಶ್ರಫಿ ಮೊಡಂತ್ಯಾರ್ ನೇತೃತ್ವದಲ್ಲಿ  ಮೌಲೂದ್ ಪಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ನಡೆದ ಮಜ್ಲಿಸುನ್ನೂರ್ ಶಿಬಿರವನ್ನು ಅಸ್ಕರ್ ಅಲಿ ತಂಙಳ್ , ಅಬ್ದುಲ್ ಖಾದರ್ ಸಅದಿ , ಇಬ್ರಾಹಿಂ ಫೈಝಿ, ಉಸ್ತಾದ್ ಅಬ್ದುಲ್ ರಝಾಕ್ ಪಾತೂರು ಮೊದಲಾದವರ ನೇತೃತ್ವದಲ್ಲಿ ನಡೆಯಿತು. ನಂತರ ಪುಟಾಣಿ  ಮಕ್ಕಳ ಮತ್ತು ಹಿರಿಯರ ಸಾಂಸ್ಕೃತಿಕ  ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಕುಕ್ಕರಿ ಮತ್ತು ಕ್ರಿಯೇಟಿವ್ ಆರ್ಟ್ಸ್ ಇದರ ತೀರ್ಪುಗಾರರಾಗಿ ಸಂಶುದ್ದೀನ್ ಕಲ್ಕಾರ್, ಮಹಮ್ಮದ್ ಮಾಡಾವು, ಅಶ್ರಫ್ ಬಾಳೆಹೊನ್ನೂರ್, ಮಹಮ್ಮದ್ ರಫೀಕ್ ಸುರತ್ಕಲ್ ಸಹಕರಿಸಿದರು.

ವೇದಿಕೆಯಲ್ಲಿ ದಾರುನ್ನೂರ್ ಯುಎಇ ಅಧ್ಯಕ್ಷ ಸಂಶುದ್ದೀನ್ ಸೂರಲ್ಪಾಡಿ, ಮುಖ್ಯ ಪ್ರಭಾಷಕರಾದ ಅಲ್ ಹಾಫಿಝ್ ಉಸ್ತಾದ್, ನಿಝಾಮುದ್ದೀನ್ ಅಝ್ ಹರಿ ಅಲ್ ಖಾಸಿಮಿ , ಸಯ್ಯದ್ ಆಸ್ಕರ್ ಅಲಿ ತಂಙಳ್, ಹಾಜಿ ಅಹ್ಮದ್ ಮತೀನ್ ಚಿಂಲಿ ಮಂಗಳೂರು, ಅಬ್ದುಲ್ಲಾ ಹಾಜಿ ಮದುಮೂಲೆ, ಬಶೀರ್ ಬಂಟ್ವಾಳ್, ಮಹಮ್ಮದ್ ಮುಸ್ತಾಕ್ ಕದ್ರಿ, ಸಲೀಂ ಅಲ್ತಾಫ್ ಫರಂಗಿಪೇಟೆ, ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ, ಶೌಕತ್ ಅಲಿ ಹುದವಿ, ಸಂಶುದ್ದೀನ್ ಕಲ್ಕಾರ್,  ಅಶ್ರಫ್ ಖಾನ್ ಮಾಂತೂರು, ಆಶ್ರಫ್ ನಾಟೆಕಲ್, ಮಹಮ್ಮದ್ ಆಸಿಫ್ ಮಸೂದ್, ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ , ಯೂಸುಫ್ ಹಾಜಿ ಬೇರಿಕೆ, ಅಬ್ದುಲ್ ಖಾದರ್ ಬೈತಡ್ಕ, ಶರೀಫ್ ಕಾವು, ಮಹಮ್ಮದ್ ಹಾಜಿ ಮಂಡೆಕೋಲ್ ಮೊದಲಾದವರು ಉಪಸ್ಥಿತರಿದ್ದರು.

ದಾರುನ್ನೂರ್ ಯು ಎ ಇ ಪ್ರಧಾನ ಕಾರ್ಯದರ್ಶಿ ಮತ್ತು  ಮೆಹಫಿಲ್ ಏ ಮೀಲಾದ್ ಚೇರ್ಮೇನ್  ಬದ್ರುದ್ದೀನ್ ಹೆಂತಾರ್ ಸ್ವಾಗತಿಸಿದರು. ಈ ಸಂದರ್ಭ ದಾರುನ್ನೂರ್ ಕೇಂದ್ರ ಸಮಿತಿ ವತಿಯಿಂದ ಮುದ್ರಿಸಲಾದ  2020 ರ ಡೈರಿ ಬಿಡುಗಡೆಗೊಳಿಸಿದರು. 

ನಾಸಿರ್ ಸುರತ್ಕಲ್ , ಮಹಮ್ಮದ್ ಸಾಜಿದ್ ಬಜ್ಪೆ,  ಶರೀಫ್ ಕೊಡ್ನೀರ್ ,  ನೂರ್ ಮಹಮ್ಮದ್ ನೀರ್ಕಜೆ, ನಾಸಿರ್ ಬಪ್ಪಳಿಗೆ, ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ತಾಹಿರ್ ಹೆಂತಾರ್, ತಯ್ಯಿಬ್ ಹೆಂತಾರ್, ಆಸಿಫ್ ಮರೀಲ್ , ಜಾಬಿರ್ ಬೆಟ್ಟಂಪಾಡಿ , ರಹ್ಮಾನ್ ಪೆರಾಜೆ, ನವಾಝ್ ಮನಲ್, ಅಬೂಬಕ್ಕರ್ ಸಿದ್ದೀಕ್ ಮೂಡಬಿದ್ರಿ, ಇಸ್ಮಾಯಿಲ್ ಮುಂಧೀರ್ ತೋಡಾರ್ , ಅಬ್ದುಲ್ ಲತೀಫ್ ಕೌಡಿಚ್ಚಾರ್, ಸಮ್ಶೀರ್ ಬಾಂಬಿಲ, ಜಾಬಿರ್ ಬಪ್ಪಳಿಗೆ, ರಿಯಾಝ್ ಪಟ್ಟಾಡಿ, ಉಸ್ಮಾನ್ ಕೆಮ್ಮಿಂಜೆ , ಬಶೀರ್ ಕೆಮ್ಮಿಂಜೆ , ಇಂತಿಯಾಝ್ ಕಡಬ, ಮುನೀರ್ ಕಾಞ್ಜಂಗಾಡ್, ಇಬ್ರಾಹಿಂ ಅಬೂಬಕ್ಕರ್ ಕುಂಡಾಜೆ, ರಿಫಾಯಿ ಗೂನಡ್ಕ, ಸಂಶುದ್ದೀನ್ ಕುಟ್ಯಾಳ ಮೊದಲಾದವರು ಸಹಕರಿಸಿದರು.

ನೂರ್ ಮಹಮ್ಮದ್ ನೀರ್ಕಜೆ ಕಾರ್ಯಕ್ರಮ ನಿರೂಪಿಸಿ, ಮೆಹಫಿಲ್ ಏ ಮೀಲಾದ್ ಕಾರ್ಯದರ್ಶಿ ಮಹಮ್ಮದ್ ರಫೀಕ್ ಸುರತ್ಕಲ್ ವಂದಿಸಿದರು. ಆಶ್ರಫ್ ಪರ್ಲಡ್ಕ, ಅಬ್ದುಲ್ ರಝಾಕ್ ಕರೈ, ಜಬ್ಬಾರ್ ಕಲ್ಲಡ್ಕ, ಸಿದ್ದೀಕ್ ಪಾಣೆಮಂಗಳೂರು ಮೊದಲಾದವರು ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News