ಆಫ್ಕೋ ಡೈಮಂಡ್-ಜೆಮ್ ಟೆಸ್ಟಿಂಗ್ ಲ್ಯಾಬೋರೇಟರಿ ಶುಭಾರಂಭ

Update: 2019-12-11 16:28 GMT

ಮಂಗಳೂರು, ಡಿ.11: ಆಫ್ರಿಕಾ ಖಂಡದ ಜಾಂಬಿಯ ದೇಶದ ರಾಜಧಾನಿ ಉಸಾಕದಲ್ಲಿ ಆಫ್ಕೋ ಡೈಮಂಡ್ ಹಾಗೂ ಜೆಮ್ ಟೆಸ್ಟಿಂಗ್ ಲ್ಯಾಬೋರೇಟರಿಯು ಮಂಗಳವಾರ ಶುಭಾರಂಭಗೊಂಡಿತು.

ಜಾಂಬಿಯದ ಎಮರಾಲ್ಡ್ ಮೈನಿಂಗ್ ಅಸೋಸಿಯೇಶನ್‌ನ ಅಧ್ಯಕ್ಷ ವಿಕ್ಟರ್ ಕಲೇಶ್ ಲ್ಯಾಬೋರೇಟರಿ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಚೇರ್‌ಮನ್ ಡಾ.ಅಶ್ರಫ್ ಕಮ್ಮಾಡಿಯವರು ಭಾರತದಲ್ಲಿ ಹುಟ್ಟಿ ಬೆಳೆದರೂ ಜಾಂಬಿಯಾದಲ್ಲಿ ಡೈಮಂಡ್ ವ್ಯವಹಾರ ಆರಂಭಿಸಿರುವುದು ಸಂತಸದ ವಿಚಾರ. ಸಂಸ್ಥೆಯು ಜಾಂಬಿಯಾದಲ್ಲಿ ಒಳ್ಳೆಯ ಹೆಸರು ಗಳಿಸಲಿ ಎಂದು ಶುಭ ಹಾರೈಸಿದರು.

ಜೆಮ್ ಟೆಸ್ಟಿಂಗ್ ಲ್ಯಾಬ್‌ನ್ನು ಫೆಡರೇಶನ್ ಆಫ್ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಧ್ಯಕ್ಷ ಜೋಸೆಫ್ ಮುವಾಂಝ ಉದ್ಘಾಟಿಸಿದರು.
ಆಫ್ಕೋ ಡೈಮಂಡ್ ಸಂಸ್ಥೆಯ ಚೇರ್‌ಮನ್ ಡಾ.ಅಶ್ರಫ್ ಕಮ್ಮಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಡೈಮಂಡ್ ಎಮರಾಲ್ಡ್ ರೂಬಿ ಹಾಗೂ ಬೇಸ್‌ಮೆಟಲ್ ಗಣಿಗಾರಿಕೆಯ ಅನುಮತಿ ಪಡೆದ ಕಂಪೆನಿಯಾಗಿದೆ. ವರ್ಷಕ್ಕೆ 80 ಮಿಲಿಯನ್ ಡಾಲರ್ ವ್ಯಾಪಾರ-ವಹಿವಾಟು ನಡೆಸಲಾಗುವುದು ಎಂದರು.

ಮುಖ್ಯ ಅತಿಥಿಯಾಗಿ ಇಮಿಗ್ರೇಶನ್‌ನ ಇಮಾನ್ಯುವೆಲ್ ಬೂಝಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಕಾನೂನು ಸಲಹೆಗಾರ ನ್ಯಾಯವಾದಿ ಮೂಸ ಮುಹಮ್ಮದ್ ಕುಂಞಿ ಫೈಂಬಚ್ಚಲ್ ಶುಭ ಹಾರೈಸಿದರು. ಕಂಪೆನಿಯ ಕಾರ್ಯದರ್ಶಿ ಸಂಡೆ ಮಲಿಕೊ ಹಾಗೂ ಡೈರೆಕ್ಟರ್ ಗಾಡ್ ಫ್ರೇಶಬ್ಬ ಉಪಸ್ಥಿತರಿದ್ದರು. ಸಂಸ್ಥೆಯ ಸೇಲ್ಸ್ ಆಪರೇಶನ್ ಡೈರೆಕ್ಟರ್ ಯೋಗೀಶ್ ಬಿ. ಶೆಣೈ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News